ವೃದ್ಧಚಾಣಕ್ಯನೀತಿದರ್ಪಣಸಾರಃ ೨

🌞🌞 *ವೃದ್ಧಚಾಣಕ್ಯನೀತಿದರ್ಪಣಸಾರಃ ೨* 🌞🌞

🌸🌸 *ತೃತೀಯೋऽಧ್ಯಾಯ:* 🌸🌸

*ಕಸ್ಯ ದೋಷ: ಕುಲೇ ನಾಸ್ತಿ ವ್ಯಾಧಿನಾ ಕೋ ನ ಪೀಡಿತ:|*
*ವ್ಯಸನಂ ಕೇನ ನ ಪ್ರಾಪ್ತಂ ಕಸ್ಯ ಸೌಖ್ಯಂ ನಿರನ್ತರಮ್||१||*

*ಅನ್ವಯ:-*
ಕಸ್ಯ ಕುಲೇ ದೋಷ: ನಾಸ್ತಿ? ಕ: ವ್ಯಾಧಿನಾ ನ ಪೀಡಿತ:? ಕೇನ ವ್ಯಸನಂ ನ ಪ್ರಾಪ್ತಮ್? ಕಸ್ಯ ನಿರನ್ತರಂ ಸೌಖ್ಯಮ್(ವರ್ತತೇ)?
*ಅನುವಾದ:-*
ಯಾರ ಮನೆತನ/ಕುಟುಂಬದಲ್ಲಿ  ತಪ್ಪುಗಳು/ದೋಷಗಳು ಇಲ್ಲ? ಎಲ್ಲಾ ಮನೆಗಳಲ್ಲೂ ಒಂದಲ್ಲ ಒಂದು ದೋಷ ಇದ್ದೇ ಇದೆ. *"ಸಾವಿರದ ಮನೆಯ ಸಾಸಿರವ ತಂದುಕೊಡು"* ಎಂದು ಬುದ್ಧನೆಂದಂತೆ, ಸಾವನ್ನು ಈವರೆಗೆ ಕಂಡಿರದ ಕುಟುಂಬವಿರಬಹುದೇ? ಎಂದಿಗೂ ಸಾಧ್ಯವಿಲ್ಲ. ಹುಟ್ಟಿದವನಿಗೆ ಸಾವು ತಪ್ಪಿದ್ದಲ್ಲ. ಹಾಗೆಯೇ, ಯಾರು ತಾನೇ ಇದುವರೆಗೆ ತನಗೆ ಒಮ್ಮೆಯೂ ಯಾವುದೇ ರೋಗ ಬಂದಿಲ್ಲವೆಂದು ಎದೆ ತಟ್ಟಿ ಹೇಳಲು ಸಾಧ್ಯ? ಯಾರಿಗೆ ತಾನೇ ಒಂದು ಬಾರಿಯಾದರೂ ದು:ಖವು ಬಂದಿರುವುದಿಲ್ಲ? ಯಾರಿಗೆ ಎಡೆಬಿಡದ ಸುಖವು ಇರುವುದು?!
🌲🌲🌲🌲🌲🌲🌲🌲🌲🌲🌲🌲🌲🌲🌲🌲🌲🌲🌲
👶🏼👶🏼 *ವೃದ್ಧಚಾಣಕ್ಯನೀತಿದರ್ಪಣಸಾರ:* 👶🏼👶🏼

*ಏತದರ್ಥಂ ಕುಲೀನಾನಾಂ ನೃಪಾ: ಕುರ್ವನ್ತಿ ಸಙ್ಗ್ರಹಮ್|*
*ಆದಿಮಧ್ಯಾವಸಾನೇಷು ನ ತ್ಯಜನ್ತಿ ಚ ತೇ ನೃಪಮ್||೫||*

ಇದಕ್ಕಾಗಿಯೇ(ದುರ್ಜನರು ಸರ್ಪಕ್ಕಿಂತಲೂ ಹೀನರಾಗಿರುವುದರಿಂದ) ರಾಜರು(ಇಂದು ಮಂತ್ರಿಗಳು/ರಾಜಕಾರಣಿಗಳು)ಸತ್ಕುಲಪ್ರಸೂತರನ್ನೇ ತಮ್ಮ ಕಾರ್ಯಗಳಿಗಾಗಿ ಆಯ್ಕೆಮಾಡುತ್ತಾರೆ. ಯಾಕೆಂದರೆ, ಅಂಥವರು ಕಾರ್ಯಾರಂಭದಲ್ಲೂ, ನಡುವೆಯೂ, ಕೊನೆಯಲ್ಲೂ (ಎಂದೆಂದಿಗೂ)ರಾಜನನ್ನು ತ್ಯಜಿಸುವುದಿಲ್ಲ.

🌴🌴🌴🌴🌴🌴🌴🌴🌴🌴🌴🌴🌴🌴🌴🌴🌴🌴🌴
🌼🌼 *वृद्धचाणक्यनीतिदर्पणसार:* 🌼🌼

*प्रलये भिन्नमर्यादा भवन्ति किल सागरा:।*
*सागरा भेदमिच्छन्ति प्रलयेऽपि न साधव:॥६॥*

ಪ್ರಳಯಕಾಲದಲ್ಲೂ ಸಾಗರಗಳು ತಮ್ಮ ಪ್ರತ್ಯೇಕತೆಯನ್ನು ಬಯಸುತ್ತವೆ. ಆದರೆ ಸಾಧುಸಂತರು ಪ್ರಳಯದಂತಹ ಕಠಿಣ ಪರಿಸ್ಥಿತಿಯಲ್ಲೂ ತಾವು ಸಮಾಜದ ಹಿತರಕ್ಷಣೆಗೆ ಬದ್ಧರಾಗಿರುತ್ತಾರೆಯೇ ಹೊರತು, ತಮ್ಮನ್ನು ನಂಬಿದ ಸಮಾಜದಿಂದ ಪ್ರತ್ಯೇಕಿಸಿಕೊಳ್ಳುವುದಿಲ್ಲ.

🌴🌴🌴🌴🌴🌴🌴🌴🌴🌴🌴🌴🌴🌴🌴🌴🌴🌴🌴
*वृद्धचाणक्यनीतिदर्पणसार:*

*मूर्खस्तु परिहर्तव्य: प्रत्यक्षो द्विपद: पशु:।*
*भिद्यते वाक्यशल्येन अदृश्य: कण्टको यथा॥७॥*

ಮೂರ್ಖನನ್ನು ದೂರವಿಡತಕ್ಕದ್ದು. ಯಾಕೆಂದರೆ ಅವನು ಸಾಕ್ಷಾತ್ ೨ ಕಾಲುಗಳ ಪಶುವೇ ಸರಿ. ಅದೃಶ್ಯವಾಗಿರುವ ಮುಳ್ಳು ಹೇಗೆ ಗೊತ್ತಾಗದಂತೆ ಚುಚ್ಚುವುದೋ ಹಾಗೆಯೇ ಮೂರ್ಖನು ಯಾವಾಗ ನಮ್ಮನ್ನು ಮಾತಿನ ಬಾಣದಿಂದ ತಿವಿಯುವನೆಂಬುದರ ಅರಿವು ನಮಗಾಗದು.
*वृद्धचाणक्यनीतिदर्पणसार:*

*रूपयौवनसम्पन्ना: विशालकुलसम्भवा:।*
*विद्याहीना न शोभन्ते निर्गन्धा इव किंशुका:॥८॥*

ಕಿಂಶುಕವೆಂದರೆ ಶುಕ/ಗಿಳಿಯಂತೆ ಕಾಣುವ, ಆದರೆ ನಿಜವಾಗಿ ಗಿಳಿಯಲ್ಲದ, ಅರ್ಥಾತ್ ಬಾಹ್ಯರೂಪ,ಆಕಾರಗಳು ಸುಂದರವಾಗಿದ್ದರೂ ನಿಜವಾಗಿ ಸಾರವತ್ತಾದುದಲ್ಲ, ಸಾರಹೀನವಾದುದು, ವ್ಯರ್ಥವಾದುದೆಂದು ಅರ್ಥ. ಪಾಲಾಶಪುಷ್ಪ(ಕಿಂಶುಕ)ವು ನೋಡಲು ಮನೋಹರವಾಗಿದ್ದರೂ ಸುವಾಸನೆಯಿಲ್ಲದಿರುವುದರಿಂದ ಶೋಭಿಸದಂತೆಯೇ, ಬಹುದೊಡ್ಡ ಮನೆತನದಲ್ಲಿ ಹುಟ್ಟಿದ, ಸೌಂದರ್ಯ,ಯೌವನಾದಿಗಳಿಂದ ಕೂಡಿದವರೂ ಸಹ ವಿದ್ಯಾಹೀನರಾದರೆ ಶೋಭಿಸರು.
🌺🌺 *वृद्धचाणक्यनातिदर्पणसार:* 🌺🌺

*कोकिलानां स्वरो रूपं स्त्रीणां रूपं पतिव्रतम्।*
*विद्या रूपं कुरूपाणां क्षमा रूपं तपस्विनाम्॥९॥*

_ಕೋಗಿಲೆಗಳಿಗೆ ಇಂಪಾದ ಕಂಠಸಿರಿಯೇ ರೂಪವು; ಸ್ತ್ರೀಯರಿಗೆ ಪಾತಿವ್ರತ್ಯವ್ರತಧಾರಣೆಯೇ ಚೆಲುವು; ಕುರೂಪಿಗಳಿಗೆ ಕಲಿತ ವಿದ್ಯೆಯೇ ಸೌಂದರ್ಯವು_( *ವಿದ್ಯೆಯುಳ್ಳವನ ಮುಖವು ಮುದ್ದು ಬರುವಂತಿಕ್ಕು ವಿದ್ಯೆ ಇಲ್ಲದವನ ಮುಖವು ಹಾಳೂರ ಹದ್ದಿನಂತಿಕ್ಕು ಸರ್ವಜ್ಞ*) _; ಹಾಗೆಯೇ, ತಪಸ್ವಿಗಳಿಗೆ ಕ್ಷಮಾಗುಣವೇ(ಮುನಿಯದಿರುವುದೇ) ಭೂಷಣವು._
🌴🌴🌴🌴🌴🌴🌴🌴🌴🌴🌴🌴🌴🌴🌴🌴🌴🌴🌴
🕉🔯✡ *वृद्धचाणक्यनीतिदर्पणसार:* 🕉🔯✡

*त्यजेदेकं कुलस्यार्थे ग्रामस्यार्थे कुलं त्यजेत्।*
*ग्रामं जनपदस्यार्थे आत्मार्थे पृथिवीं त्यजेत्॥१०॥*

_ಒಬ್ಬನಿಂದ ಇಡೀ ಕುಲ/ವಂಶ/ಮನೆತನ/ಕುಟುಂಬದ ಮಾನಾಭಿಮಾನಗಳಿಗೆ ಹಾನಿಯಾಗುವ ಪ್ರಸಂಗ ಬಂದಾಗ, ಅವನನ್ನು ಕುಲದಿಂದ ಬಹಿಷ್ಕರಿಸಬೇಕು. ಗ್ರಾಮದ ಸಂರಕ್ಷಣೆಯ ವಿಷಯದಲ್ಲಿ ಅಗತ್ಯಬಿದ್ದರೆ ಕುಲವನ್ನೂ ಬಿಡಬೇಕು. ಹಾಗೆಯೇ, ನಾಡಿನ ಹಿತಕ್ಕಾಗಿ ಅವಶ್ಯವಾದರೆ, ಗ್ರಾಮವನ್ನು ತೊರೆಯಬೇಕು. ಕೊನೆಗೆ, ಆತ್ಮದ ಉದ್ಧಾರಕ್ಕಾಗಿ/ಮೋಕ್ಷಕ್ಕಾಗಿ ಭೂಮಿಯ ಮೇಲಿನ ಸರ್ವವಿಷಯವಸ್ತುಗಳ ಸಂಗವನ್ನೂ ಬಿಡಬೇಕು; ಅರ್ಥಾತ್, ಕೊನೆಯ ಆಶ್ರಮವಾದ ಸಂನ್ಯಾಸಾಶ್ರಮವನ್ನು ಸ್ವೀಕರಿಸಬೇಕು.(ಬ್ರಹ್ಮಚರ್ಯ, ಗಾರ್ಹಸ್ಥ್ಯ, ವಾನಪ್ರಸ್ಥ ಹಾಗೂ ಸಂನ್ಯಾಸ - ಇವು ೪ ಆಶ್ರಮಗಳು)._

🍀🍀🍀🍀🍀🍀🍀🍀🍀🍀🍀🍀🍀🍀🍀🍀🍀🍀🍀
🌸🌸 *वृद्धचाणक्यनीतिदर्पणसार:* 🌸🌸

*उद्योगे नास्ति दारिद्र्यं जपतो नास्ति पातकम्।*
*मौने च कलहो नास्ति नास्ति जागरिते भयम्॥११॥*

_ಉದ್ಯೋಗದಲ್ಲಿ ತೊಡಗಿಸಿಕೊಂಡಿರುವವನಿಗೆ ಬಡತನವಿರದು. ದೇವರ ನಾಮಜಪಾದಿಗಳನ್ನು ಮಾಡಿದರೆ ಪಾಪವು ಪರಿಹಾರ. ವಿಶೇಷವಾಗಿ ಚರ್ಚೆ-ವಿವಾದಾದಿಗಳು ಬಂದಾಗ ಮೌನವಾಗಿದ್ದರೆ ಜಗಳ ಬಾರದು. ಹಾಗೆಯೇ, ಸದಾ ಜಾಗೃತವಾದ ಇಂದ್ರಿಯ-ಮನ-ಬುದ್ಧಿಗಳಿರುವವನಿಗೆ(ಎಚ್ಚರದಿಂದಿರುವವನಿಗೆ) ಭಯವಿಲ್ಲ._

🍃🍃🍃🍃🍃🍃🍃🍃🍃🍃🍃🍃🍃🍃🍃🍃🍃🍃🍃
🌼🌼 *वृद्धचाणक्यनीतिदर्पणसार:* 🌼🌼

*को हि भार: समर्थानां किं दूरं व्यवसायिनाम्।*
*को विदेश: सुविद्यानां क: पर: प्रियवादिनाम्॥१३॥*

_ಸಮರ್ಥರಿಗೆ ಯಾವ ಕಾರ್ಯ ತಾನೇ ಭಾರವೆನಿಸುವುದು? ಕಾರ್ಯಾಸಕ್ತರಿಗೆ, ಕರ್ಮನಿರತರಿಗೆ ಯಾವುದು ತಾನೇ ದೂರವೆನಿಸುವುದು? ಉತ್ತಮ ವಿದ್ವನ್ಮಣಿಗಳಿಗೆ / ವಿದ್ಯಾವಂತರಿಗೆ ವಿದೇಶವೆಂಬುದಿಲ್ಲ. ಪ್ರಿಯವಾದ ಮಾತುಗಳನ್ನಾಡುವವರಿಗೆ ಪರರು/ಶತ್ರುಗಳು ಯಾರು ತಾನೇ ಇರಲು ಸಾಧ್ಯ?_
🍀🍀🍀🍀🍀🍀🍀🍀🍀🍀🍀🍀🍀🍀🍀🍀🍀🍀🍀
🌼🌼 *वृद्धचाणक्यनीतिदर्पणसार:* 🌼🌼

*एकेनापि सुवृक्षेण पुष्पितेन सुगन्धिना।*
*वासितं तद्वनं सर्वं सुपुत्रेण कुलं यथा॥१४॥*

_ಹೇಗೆ ಕಾಡಿನಲ್ಲಿ ಒಂದೇ ಒಂದು ವೃಕ್ಷವು ಸುಗಂಧಭರಿತ ಪುಷ್ಪಮಯವಾದಾಗ ಆ ಇಡೀ ವನವೇ ಸುವಾಸನೆಯಿಂದ ಕೂಡಿರುವುದೋ, ಅಂತೆಯೇ ಒಬ್ಬ ಒಳ್ಳೆಯ ಪುತ್ರನಿಂದ ಇಡಿಯ ಕುಲವೇ ಬೆಳಗುವುದು._
🍀🍀🍀🍀🍀🍀🍀🍀🍀🍀🍀🍀🍀🍀🍀🍀🍀🍀🍀
🌺🌺 *वृद्धचाणक्यनीतिदर्पणसार:* 🌺🌺

*एकेन शुष्कवृक्षेण दह्यमानेन वह्निना।*
*दह्यते तद्वनं सर्वं कुपुत्रेण कुलं यथा॥१५॥*

_ಹೇಗೆ ಕಾಡ್ಗಿಚ್ಚಿನಿಂದ ಹೊತ್ತಿ ಉರಿಯುತ್ತಿರುವ ಒಂದೇ ಒಂದು ಒಣಗಿದ ಮರದಿಂದ ಇಡಿಯ ಕಾನನವೇ ದಹಿಸಲ್ಪಡುತ್ತದೆಯೋ ಹಾಗೆಯೇ, ಕೆಟ್ಟ ಮಗನಿಂದ ಇಡೀ ವಂಶವೇ ಕೆಡುವುದು._

🍃🍃🍃🍃🍃🍃🍃🍃🍃🍃🍃🍃🍃🍃🍃🍃🍃🍃🍃
💐💐 *वृद्धचाणक्यनीतिदर्पणसार:* 💐💐

_*एकेनापि सुपुत्रेण विद्यायुक्तेन साधुना।*_
_*आह्लादितं कुलं सर्वं यथा चन्द्रेण शर्वरी॥१६॥*_

_ಹೇಗೆ ಚಂದ್ರಮನು ನಿಶೆಯನ್ನು ಬೆಳದಿಂಗಳಿನಿಂದ ಆಹ್ಲಾದಕರವನ್ನಾಗಿ ಮಾಡುತ್ತಾನೋ ಅಂತೆಯೇ, ವಿದ್ಯಾವಂತ ಸಜ್ಜನನಾದ ಒಬ್ಬನೇ ಒಬ್ಬ ಮಗನಿಂದ ಇಡೀ ವಂಶವೇ ಬೆಳಗುವುದು; ಆನಂದಿತವಾಗುವುದು._
🍀🍀🍀🍀🍀🍀🍀🍀🍀🍀🍀🍀🍀🍀🍀🍀🍀🍀🍀
🌼🌼 *वृद्धचाणक्यनीतिदर्पणसार:* 🌼🌼

*किं जातैर्बहुभि: पुत्रै: शोकसन्तापकारकै:।*
*वरमेक: कुलालम्बी यत्र विश्राम्यते कुलम्॥१७॥*

_ದು:ಖದುಮ್ಮಾನಕಾರಕರಾದ ಮಕ್ಕಳು ಎಷ್ಟಿದ್ದರೇನು? ಯಾರನ್ನು ನಂಬಿ ಇಡಿಯ ಕುಟುಂಬವೇ ನಿರಾಳವಾಗಿರುವುದೋ ಅಂತಹ ಒಬ್ಬನೇ ಒಬ್ಬ ಪುತ್ರನಿದ್ದರೂ ಸಾಕು. ಅವನೇ ಶ್ರೇಷ್ಠನು._
☘☘☘☘☘☘☘☘☘☘☘☘☘☘☘☘☘☘☘
🌼🌼 *वृद्धचाणक्यनीतिदर्पणसार:* 🌼🌼

*लालयेत्पञ्चवर्षाणि दशवर्षाणि ताडयेत्।*
*प्राप्ते तु षोडशे वर्षे पुत्रं मित्रवदाचरेत् (पुत्रे मित्रत्वमाचरेत्)_॥१८॥*

_ಮಕ್ಕಳನ್ನು  ೫ ವರ್ಷಗಳವರೆಗೆ ಮುದ್ದಿನಿಂದ ಸಾಕಬೇಕು; ನಂತರದ ೧೦ ವರ್ಷಗಳ ಕಾಲ, ಅರ್ಥಾತ್ ೧೫ ವರ್ಷ ಪ್ರಾಯದವರೆಗೆ ಶಿಲ್ಪಿಯು ಶಿಲಾಮೂರ್ತಿಯನ್ನು ಕೆತ್ತಿದಂತೆ ಹೊಡೆದು ಬಡಿದು ತಿದ್ದಬೇಕು; ೧೬ ವರ್ಷ ಪ್ರಾಯ ಹೊಂದಿದ ಮಕ್ಕಳನ್ನು ಮಿತ್ರರಂತೆ ಕಾಣಬೇಕು._
🍀🍀🍀🍀🍀🍀🍀🍀🍀🍀🍀🍀🍀🍀🍀🍀🍀🍀🍀
🍃🍃 *वृद्धचाणक्यनीतिदर्पणसार:* 🍃🍃

*उपसर्गेऽन्यचक्रे च दुर्भिक्षे च भयावहे।*
*असाधुजनसम्पर्के य: पलायेत्स जीवति॥१९॥*

_ಸಾಂಕ್ರಾಮಿಕರೋಗಾ(ಅಂಟುಜಾಡ್ಯಾ)ದಿಗಳು ಕಂಡುಬಂದಾಗ, ಬಲಿಷ್ಠಶತ್ರುಸೇನೆಯು ರಾಜ್ಯವನ್ನು ಸುತ್ತುವರಿದಾಗ, ಭಯಂಕರವಾದ ಬರಗಾಲ/ಕ್ಷಾಮ ತಲೆದೋರಿದಾಗ ಮತ್ತು ದುರ್ಜನರು ಹತ್ತಿರ ಬಂದಾಗ, ಯಾವನು ಪಲಾಯನ ಮಾಡುವನೋ ಅವನು ಬದುಕಿಕೊಳ್ಳುತ್ತಾನೆ._
🌼🌼🌼🌼🌼🌼🌼🌼🌼🌼🌼🌼🌼🌼🌼🌼🌼🌼🌼
🌴🌴 *वृद्धचाणक्यनीतिदर्पणसार:* 🌴🌴

*धर्मार्थकाममोक्षेषु यस्यैकोऽपि न विद्यते।*
*जन्मजन्मनि मर्त्येषु मरणं तस्य केवलम्॥२०॥*

_ಧರ್ಮ,ಅರ್ಥ,ಕಾಮ,ಮೋಕ್ಷಗಳೆಂಬ ಚತುರ್ವಿಧಪುರುಷಾರ್ಥಗಳಲ್ಲಿ ಯಾವೊಂದನ್ನೂ ಸಾಧಿಸದ ಮನುಜನು, ಈ ಮರ್ತ್ಯಲೋಕದಲ್ಲಿ ಎಷ್ಟು ಜನ್ಮಗಳನ್ನು ಪಡೆದರೂ ಕೇವಲ ಮರಣವನ್ನೇ ಹೊಂದುವನಲ್ಲದೆ ಯಾವ ಶ್ರೇಯ:-ಪ್ರೇಯಾದಿಗಳನ್ನೂ ಪಡೆಯಲಾರನು; ಅರ್ಥಾತ್ ಅವನ ಜೀವನವು ವ್ಯರ್ಥವೇ ಸರಿ._
🌼🌼🌼🌼🌼🌼🌼🌼🌼🌼🌼🌼🌼🌼🌼🌼🌼🌼🌼
🌼🌼 *वृद्धचाणक्यनीतिदर्पणसार:* 🌼🌼

*मूर्खा यत्र न पूज्यन्ते धान्यं यत्र सुसञ्चितम्।*
*दम्पत्यो: कलहो नास्ति तत्र श्री: स्वयमागता॥२१॥*

_ಮೂರ್ಖರು ಎಲ್ಲಿ ಪೂಜಿಸಲ್ಪಡುವುದಿಲ್ಲವೋ, ಧಾನ್ಯಾದಿ ಸಂಪತ್ತುಗಳು ಎಲ್ಲಿ ಬಹುವಾಗಿ(ಒಳ್ಳೆಯ ರೀತಿಯಿಂದ) ಸಂಗ್ರಹಿತವಾಗಿದೆಯೋ, ಪತಿ-ಪತ್ನೀ ಕಲಹ ಎಲ್ಲಿ ಇರುವುದಿಲ್ಲವೋ ಅಂಥ ಮನೆಗೆ ಧನಲಕ್ಷ್ಮಿಯು(ಸಂಪತ್ತು) ತಾನೇ ತಾನಾಗಿ ಬರುವಳು._
🌴🌴🌴🌴🌴🌴🌴🌴🌴🌴🌴🌴🌴🌴🌴🌴🌴🌴🌴
🌼🌼🌼 *वृद्धचाणक्यनीतिदर्पणसार:* 🌼🌼🌼

_॥तृतीयोऽध्याय: समाप्त:॥_

_अथ चतुर्थोऽध्याय:_

*आयु: कर्म च वित्तञ्च विद्या निधनमेव च।*
*पञ्चैतानि हि सृज्यन्ते गर्भस्थस्यैव देहिन:॥१॥*

_ವ್ಯಕ್ತಿಯೊಬ್ಬನ ಆಯುಸ್ಸು, ಅವನು ಜೀವಿತದಲ್ಲಿ ಮಾಡಲಿರುವ ಕರ್ಮಗಳು, ಅವನಿಗೆ ಪ್ರಾಪ್ತಿಯಾಗುವ ಸಂಪತ್ತು, ಅವನು ಪಡೆಯಬಹುದಾದ ವಿದ್ಯೆ ಹಾಗೂ ಅವನ ಮರಣದ ರೀತಿ(ಹೇಗೆ, ಯಾವಾಗ, ಎಲ್ಲಿ ಇತ್ಯಾದಿ)- ಈ ೫ ಕೂಡಾ ಅವನು ಮಾತೃಗರ್ಭಸ್ಥನಾಗಿದ್ದಾಗಲೇ ನಿರ್ಧರಿಸಲ್ಪಟ್ಟಿರುತ್ತವೆ._
🍃🍃🍃🍃🍃🍃🍃🍃🍃🍃🍃🍃🍃🍃🍃🍃🍃🍃🍃
🍃🍂🍁 *वृद्धचाणक्यनीतिदर्पणसार:* 🍁🍂🍃

*साधुभ्यस्तु निवर्तन्ते पुत्रमित्राणि बान्धवा:।*
*ये च तै: सह गन्तारस्तद्धर्मात्सुकृतं कुलम्॥२॥*

_ಯಾರ ಪುತ್ರ,ಮಿತ್ರ ಅಥವಾ ಬಾಂಧವರು ಸಾಧುಸಂತರೊಂದಿಗೆ ತೆರಳುತ್ತಾರೋ, ಹಾಗೆ ಅವರೊಂದಿಗೆ ತೆರಳಿದವರ ಆ ಧರ್ಮದಿಂದ ಅವರ ಕುಲವೇ ಪುಣ್ಯ(ಸು-ಕೃತ, ಒಳ್ಳೆಯ ಕರ್ಮ)ಯುತವಾಗುವುದು._
🌼🌼🌼🌼🌼🌼🌼🌼🌼🌼🌼🌼🌼🌼🌼🌼🌼🌼🌼
🌸🌸🌸 *वृद्धचाणक्यनीतिदर्पणसार:* 🌸🌸🌸

*दर्शनध्यानसंस्पर्शैर्मत्स्यी कूर्मी च पक्षिणी।*
*शिशुं पालयते नित्यं तथा सज्जनसङ्गति:॥३॥*

_ನೋಡಿಕೊಳ್ಳುವಿಕೆ, ಗಮನಕೊಡುವಿಕೆ, ಆರೈಕೆಗಳಿಂದ ಹೆಣ್ಣು ಮೀನು, ತಾಯಿ ಆಮೆ, ತಾಯಿಹಕ್ಕಿ ಇತ್ಯಾದಿಗಳು ಹೇಗೆ ತಮ್ಮ ಪುಟ್ಟಮರಿಗಳನ್ನು ಪಾಲಿಸಿ,ಪೋಷಿಸಿ,ಸಾಕಿ,ಸಲಹುತ್ತವೆಯೋ, ಸಜ್ಜನರ ಸಂಗವೂ ಅಂತೆಯೇ ಆಗಿದೆ; ಅಂತಹ ಲಾಭವನ್ನೀಯುತ್ತದೆ._
🌱🌿☘🌱🌿🌱🌿☘🌱🌿☘🌱🌿☘🌱🌿☘🌱🌿
🌻🌻🌻 *वृद्धचाणक्यनीतिदर्पणसार:* 🌻🌻🌻

*यावत् स्वस्थो ह्ययं देहो यावन्मृत्युश्च दूरत:।*
*तावदात्महितं कुर्यात् प्राणान्ते किं करिष्यति॥४॥*

_ಎಲ್ಲಿಯವರೆಗೆ ಈ ದೇಹಾರೋಗ್ಯವು ಸುಸ್ಥಿರವಾಗಿರುವುದೋ, ಎಲ್ಲಿಯವರೆಗೆ ಸಾವು ನಮ್ಮಿಂದ ಬಹುದೂರದಲ್ಲಿರುವುದೋ, ಅಲ್ಲಿಯವರೆಗೆ ನಾವು ಆತ್ಮತೃಪ್ತಿಯಾಗುವಂತಹ, ಆತ್ಮೋದ್ಧಾರವಾಗುವಂತಹ ಕಾರ್ಯವನ್ನು ಮಾಡಬೇಕು. ಕೊನೆಗೆ ಪ್ರಾಣಬಿಟ್ಟಮೇಲೆ ಏನು ತಾನೇ ಮಾಡಲು ಸಾಧ್ಯ?_
🍃🍂🍁🍃🍂🍁🍃🍂😢🍃🍂🍁🍃🍂🍁🍃🍂🍁🍃
🌻🌻🌻 *वृद्धचाणक्यनीतिदर्पणसार:* 🌻🌻🌻

*कामधेनुगुणा विद्या ह्यकाले फलदायिनी।*
*प्रवासे मातृसदृशी विद्या गुप्तधनं स्मृतम्॥५॥*

_ವಿದ್ಯೆಯು ಕಾಮಧೇನುವಿನಂತಹ ಬೇಡಿದ್ದನ್ನು ಕೊಡುವ ಗುಣವುಳ್ಳದ್ದು; ಆಪತ್ಕಾಲದಲ್ಲಿ ಫಲಕಾರಿ,ಉಪಯುಕ್ತ; ಪ್ರವಾಸಕಾಲದಲ್ಲಿ ತಾಯಿಯಂತೆ ನಮ್ಮನ್ನು ನೋಡಿಕೊಳ್ಳುತ್ತದೆ. ಇದಕ್ಕಾಗಿಯೇ ಅಂತಹ ವಿದ್ಯೆಯು ಒಂದು *"ಆಪದ್ಧನ"*(ಆಪತ್ಕಾಲಕ್ಕಾಗುವ ಸಂಪತ್ತು) ಎಂಬುದಾಗಿ ಸ್ಮರಿಸಲ್ಪಟ್ಟಿದೆ._
🍃🍂🍁🍃🍂🍁🍃🍂🍁🍃🍂🍁🍃🍂🍁🍃🍂🍁🍃
🌸🌸🌸 *वृद्धचाणक्यनीतिदर्पणसार:* 🌸🌸🌸

*एकोऽपि गुणवान् पुत्रो निर्गुणैश्च शतैर्वर:।*
*एकश्चन्द्रस्तमो हन्ति न च तारा: सहस्रश:॥६॥*

_ಒಬ್ಬನೇ ಒಬ್ಬ ಮಗನಿದ್ದರೂ, ಅವನು ಗುಣವಂತನಾಗಿದ್ದರೆ, ನೂರಾರು ಗುಣಹೀನಪುತ್ರರಿಗಿಂತಲೂ ಶ್ರೇಷ್ಠನು. ಹೇಗೆಂದರೆ, ನಕ್ಷತ್ರಗಳು ಸಾವಿರಾರಿದ್ದರೂ ಕತ್ತಲನ್ನು ಕಳೆಯಲಾರವು; ಆದರೆ, ಚಂದ್ರನೊಬ್ಬನೇ ಇದ್ದರೂ ಇರುಳನ್ನು ಬೆಳಗುವನು._
☘🌿☘🌿☘🌿☘🌿☘🌿☘🌿☘🌿☘🌿☘🌿☘
🌻🌻🌻 *वृद्धचाणक्यनीतिदर्पणसार:* 🌻🌻🌻

*मूर्खश्चिरायुर्जातोऽपि तस्माज्जातमृतो वर:।*
*मृत: स चाल्पदु:खाय यावज्जीवं जडो दहेत्॥७॥*

_ಮೂರ್ಖಪುತ್ರನು ಚಿರಾಯುವಾಗಿರುವುದಕ್ಕಿಂತಲೂ, ಹುಟ್ಟುವಾಗಲೇ ಸತ್ತಿದ್ದರೆ ಒಳ್ಳೆಯದು. ಯಾಕೆಂದರೆ, ಅಂಥವನು ಸತ್ತರೆ ಆಗುವ ದು:ಖವು ಅತ್ಯಲ್ಪ. ಆದರೆ, ಬದುಕಿದ್ದರೆ, ಸಾಯುವವರೆಗೆ ಅವನ ಬಗೆಗಿನ ಚಿಂತೆಯೇ ಹೆತ್ತವರನ್ನು ದಿನೇ ದಿನೇ ದಹಿಸುವುದು._
☘🍁☘🍁☘🍁☘🍁☘🍁☘🍁☘🍁☘🍁☘🍁☘
🌸🌸🌸 *वृद्धचाणक्यनीतिदर्पणसार:* 🌸🌸🌸

*कुग्रामवास: कुलहीनसेवा कुभोजनं क्रोधमुखी च भार्या।*
*पुत्रश्च मूर्खो विधवा च कन्या विनाग्निना षट् प्रदहन्ति कायम्॥८॥*

_ಕುಗ್ರಾಮದಲ್ಲಿ ವಾಸ, ಕುಲಹೀನರ ಸೇವೆ, ಕೆಟ್ಟ ಭೋಜನ, ಸಿಡುಕುಮುಖದ ಪತ್ನಿ, ಮೂರ್ಖನಾದ ಪುತ್ರ, ವಿಧವೆಯಾದ ಮಗಳು - ಇವು ೬ ಬೆಂಕಿಯಿಲ್ಲದೆ ಶರೀರವನ್ನು ಸುಡುತ್ತವೆ._
🍁🍂🍃🍁🍂🍃🍁🍂🍃🍁🍂🍃🍁🍂🍃🍁🍂🍃🍁

किं तया क्रियते धेन्वा या न दोग्ध्री न गुर्विणी ।

कोऽर्थः पुत्रेण जातेन यो न विद्वान्न भक्तिमान् ॥९॥

ಹಾಲನ್ನೀಯದ, ಗರ್ಭಿಣಿಯೂ ಆಗದ ಹಸುವಿಂದೇನು ಪ್ರಯೋಜನ? ವಿದ್ವಾಂಸನೂ ಅಲ್ಲದ, ದೈವಭಕ್ತನೂ ಅಲ್ಲದ - ಇವುಗಳಲ್ಲಿ ಒಂದು ಗುಣವನ್ನಾದರೂ ಹೊಂದಿರದ ಪುತ್ರನು ಹುಟ್ಟಿದರೇನು ಸಾರ್ಥಕತೆ ಇದ್ದೀತು? ಇವೆರಡೂ ನಿಷ್ಪ್ರಯೋಜಕವೆಂದು ತಾತ್ಪರ್ಯ.

संसारतापदग्घानां त्रयो विश्रान्तिहेतवः ।

अपत्यं च कलत्रं च सतां सङ्गतिरेव च ॥१०॥

ಸಂಸಾರದ ಕಷ್ಟಗಳಿಂದ ನೊಂದು ಬೆಂದವರಿಗೆ ವಿಶ್ರಾಂತಿಗೆ ಕಾರಣವಾದವುಗಳು 3 - ಮಕ್ಕಳ ಆಟಪಾಠಗಳು, ಪತ್ನಿಯ ಪ್ರೇಮಪೂರಿತ ಸಾಂತ್ವನ ಮತ್ತು ಸಜ್ಜನರ ಸಹವಾಸ.

सकृज्जल्पन्ति राजानः सकृज्जल्पन्ति पण्डिताः ।

सकृत्कन्याः प्रदीयन्ते त्रीण्येतानि सकृत्सकृत्॥४-११॥

पदविभागः- सकृत् जल्पन्ति राजानः सकृत् जल्पन्ति पण्डिताः सकृत् कन्याः प्रदीयन्ते त्रीणि एतानि सकृत् सकृत् ॥

अन्वयार्थः- राजानः - नृपतयः / प्रभवः / भूपतयः / भूपाः / भूमिपाः / भूपालाः / क्षितिपतयः / अवनीपतयः / महीपतयः / नरेन्द्राः / प्रजेश्वराः /  भूमीन्द्राः / पृथ्विपालकाः / क्षत्रियाः / (राट् राजौ ) राजः / (नाराट् नाराजौ) नाराजः / पार्थिवाः / (क्ष्माभृत् क्ष्माभृदौ) क्ष्माभृदः / (भूभृत् भूभृदौ) भूभृदः / नृपाः / (महीक्षित् महीक्षिदौ) महीक्षिदः / नरपतयः / पार्थाः / दण्डधराः - ರಾಜರು (ಯಾವುದೇ ವಿಚಾರವನ್ನು / ಆಜ್ಞೆಯನ್ನು),

सकृत् - एकवारम् एव - ಒಮ್ಮೆ ಮಾತ್ರ,

जल्पन्ति - वदन्ति, आज्ञापयन्ति - ಹೇಳುತ್ತಾರೆ, ಆಜ್ಞಾಪಿಸುತ್ತಾರೆ.

पण्डिताः - (पण्डा वेदोज्ज्वला तत्त्वविषयिणी वा बुद्धिः । सा जाता अस्य । यद्वा पण्ड्यते तत्त्वज्ञानं प्राप्यते अस्मात् । अस्य लक्षणं यथा - निषेवते प्रशस्तानि निन्दितानि न सेवते । अनासक्तिः श्रद्दधान एतत् पण्डितलक्षणम् ॥१॥ इति चिन्तामणिः । पठकाः पाठकाश्चैव ये चान्यशास्त्रचिन्तकाः । सर्वे व्यसनिनो मूर्खा यः क्रियावान् स पण्डितः॥२॥ इति महाभारते वनपर्वे । अपि च भगवद्गीतायाम् - विद्याविनयसम्पन्ने ब्राह्मणे गवि हस्तिनि । शुनि चैव श्वपाके च पण्डिताः समदर्शिनः ॥३॥ ) शास्त्रज्ञाः, विद्वांसः, विबुधाः, बुधाः, धीमन्तः, मनीषिणः, कवयः, सूरयः, ज्ञानिनः, मेधाविनः, विपश्चितः, धीराः, कोविदाः, दोषज्ञाः, सन्तः, सुधियः, ज्ञाः, प्राज्ञाः, विचक्षणाः, दूरदर्शिनः, दीर्घदर्शिनः, समदर्शिनः, विशारदाः, विज्ञाः - ಪಂಡಿತರು (ಸೂಕ್ಷ್ಮ / ಗಹನ ವಿಚಾರಗಳನ್ನು),

सकृत् - एकवारम् एव - ಒಮ್ಮೆ ಮಾತ್ರ,

जल्पन्ति - वदन्ति, कथयन्ति, आहुः, ब्रुवन्ति - ನುಡಿಯುತ್ತಾರೆ, ಕಥನಮಾಡುತ್ತಾರೆ, ಹೇಳುತ್ತಾರೆ.

कन्याः - कुमार्यः, कन्यकाः, नार्यः, (वध्वः) - ಕುಮಾರಿಯರು, ಕನ್ಯೆಯರು, ಕನ್ನಿಕೆಯರು, ನಾರಿಯರು, ಮದುವಣಗಿತ್ತಿಯರು, (ವಧುಗಳು),

सकृत् - एकवारम् एव - ಒಂದು ಬಾರಿ ಮಾತ್ರವೇ,

प्रदीयन्ते - विवाहसंस्कारद्वारा स्वपितृभिः योग्यवरेभ्यः कन्यादानविधिना समर्प्यन्ते - ವಿವಾಹಸಂಸ್ಕಾರದ ಮೂಲಕ ತಮ್ಮ ಹೆತ್ತವರಿಂದ ಯೋಗ್ಯರಾದ ವರರಿಗೆ ಕನ್ಯಾದಾನವಿಧಿಯಿಂದ ಕೊಡಲ್ಪಡುತ್ತಾರೆ, ಸಮರ್ಪಿಸಲ್ಪಡುತ್ತಾರೆ.

एतानि - उपर्युक्तानि - ಈ ಮೇಲೆ ಹೇಳಿದ,

त्रीणि - त्रीणि कर्माणि अपि - ಮೂರು ಕೆಲಸಗಳೂ ಕೂಡ,

सकृत् सकृत् - एकैकवारम् एव क्रियन्ते - ಒಂದೇ ಒಂದು ಸಲ / ಸರ್ತಿ ಮಾತ್ರ ಮಾಡಲ್ಪಡುತ್ತವೆ.

Comments

Popular posts from this blog

ವೈದ್ಯಕೀಯಸುಭಾಷಿತಸಾಹಿತ್ಯಮ್ ೧

ಸೂಕ್ತಿವೈಭವ