Posts

Showing posts from 2019

ಮಹಾಸುಭಾಷಿತಸಂಗ್ರಹ ೧

ಮಹಾಸುಭಾಷಿತಸಂಗ್ರಹ ೧ (ಅಕಾರಾದಿ ಅನುಕ್ರಮದಲ್ಲಿ) ಅ ಅಂಶವಸ್ತವ ನಿಶಾಕರ ನೂನಂ ಕಲ್ಪಿತಾಸ್ತರುಣಕೇತಕಖಣ್ಡೈಃ | ಯೇನ ಪಾಣ್ಡುರತರದ್ಯುತಯೋ ನಃ ಕಣ್ಟಕೈರಿವ ತುದನ್ತಿ ಶರೀರಮ್ || ೧ || (ಶ್ರೀಕಂಠಚರಿತಮ್, ವಲ್ಲಭದೇವನ ಸುಭಾಷಿತಾವಲೀ) (ರಥೋದ್ಧತಾವೃತ್ತಮ್) ಎಲೈ ನಿಶಾಕರನೆ! ಚಂದಿರನೆ!! ರಾತ್ರಿಯುಂಟುಮಾಡುವವನೆ (ನಿಶಾ-ಕರ— ನಿಶಾಂ ಕರೋತಿ ಇತಿ)!!! ನಿನ್ನ ಕಿರಣಗಳು (ಅಂಶುಗಳು) ನಿಜವಾಗಿಯೂ ಕೇದಗೆಯ ದೃಢವಾದ (ತರುಣ) ಎಲೆಗಳಂತೆ ಭಾಸವಾಗುತ್ತಿವೆ. ಯಾಕೆಂದರೆ, ಯಾವ ಈ ಬೆಳದಿಂಗಳ (ಪಾಂಡುರತರ— ಬೆಳ್ಳಗಿನಂತಹ)ಕಿರಣಗಳು ನಮ್ಮ ಶರೀರವನ್ನು ಮುಳ್ಳು / ಕಂಟಕ ಗಳಿಂದ ಚುಚ್ಚಿದಂತಹ ಅನುಭವವಾಗುತ್ತಿದೆ, ಅಸಹನೀಯ (ವಿರಹ?)ವೇದನೆಯನ್ನುಂಟುಮಾಡುತ್ತಿವೆ. ಅಂಶುಕಂ ಹೃತವತಾ ತನುಬಾಹು- ಸ್ವಸ್ತಿಕಾ-ಪಿಹಿತ-ಮುಗ್ಧಕುಚಾಗ್ರಾ | ಭಿನ್ನಶಙ್ಖವಲಯಂ ಪರಿಣೇತ್ರಾ ಪರ್ಯರಮ್ಭಿ ರಭಸಾದಚಿರೋಢಾ || ೨ || (ಮಾಘನ ಶಿಶುಪಾಲವಧಮ್ ೧೦|೪೩, ಸುಭಾಷಿತರತ್ನಭಾಂಡಾಗಾರಮ್ ೩೧೬|೩, ಸುಭಾಷಿತಸುಧಾರತ್ನಭಾಂಡಾಗಾರಮ್ ೧೭೩|೮) (ಅಂಶುಕಂ) ನವವಧುವಿನ ಸೀರೆಯ ಸೆರಗು / ಉತ್ತರೀಯ / ಮೇಲುಹೊದಿಕೆಯು, ಯಾವಾಗ, (ಪರಿಣೇತ್ರಾ)ಆಕೆಯನ್ನು ಪರಿಣಯವಾದ / ವಿವಾಹವಾದ ಪತಿಯಿಂದ, (ಹೃತವತಾ)ಸೆಳೆಯಲ್ಪಟ್ಟಿತೋ ಆಗ ಆಕೆಯು, (ಮುಗ್ಧಕುಚಾಗ್ರಾ) ತನ್ನ ನಗ್ನವಾದ ಆಕರ್ಷಕ ಕುಚಾಗ್ರ (ಮೊಲೆತೊಟ್ಟು) ಗಳನ್ನು, (ತನುಬಾಹುಸ್ವಸ್ತಿಕಾಪಿಹಿತ)ತನ್ನ ನಳಿನಕೋಮಲ ತೋಳ...

ಮರುಳಮುನಿಯನ ಕಗ್ಗದ ಸಂಸ್ಕೃತಕಾವ್ಯಾನುವಾದ ೫

ಮರುಳಮುನಿಯನ ಕಗ್ಗದ ಸಂಸ್ಕೃತಕಾವ್ಯಾನುವಾದ ೫ *ಆರು ತಾನರಿತನಿನ್ನೊರ‍್ವನೇಳ್ಗೆಯ ಬಗೆಯ? |* *ಆರು ತನ್ನೇಳ್ಗೆಯನು ತಾನರಿತ ಕುಶಲಂ? ||* *ಹೇರದಿರು ನಿನ್ನ ಕಣ್ಗಾಜನಿನ್ನೊರ‍್ವಂಗೆ |* *ದಾರಿಯವನದವಂಗೆ - ಮರುಳ ಮುನಿಯ || (೬೮೮)* _ (ತಾನ್+ಅರಿತನ್+ಇನ್ನೊರ‍್ವನ+ಏಳ್ಗೆಯ)(ತನ್ನ+ಏಳ್ಗೆಯನು)(ತಾನ್+ಅರಿತ)(ಕಣ್+ಗಾಜನು+ಇನ್ನೊರ‍್ವಂಗೆ)(ದಾರಿ+ಅವನದು+ಅವಂಗೆ)_ ಇಲ್ಲಿ ಡಿವಿಜಿಯವರು ಹೇಳುತ್ತಾರೆ—  ತನ್ನ ಪ್ರಗತಿಗೆ ತನ್ನಷ್ಟು ಹಿತರು ಯಾರೂ ಇಲ್ಲ. ಯಾಕೆಂದರೆ, ಒಬ್ಬನ ಪರಿಸ್ಥಿತಿ, ಆಸಕ್ತಿ, ಸ್ವಭಾವಾದಿಗಳ ನಿಜವಾದ ತಿಳಿವು ಮತ್ತೊಬ್ಬನಿಗೆ ಇರದು. ಹಾಗಾಗಿ, ಅವನ ಉದ್ಧಾರದ ವಿಧಾನ ಯಾವುದೆಂದು ಅವನೇ ನಿರ್ಧರಿಸಿಕೊಳ್ಳಬೇಕು. ಇತರರ ನಿರ್ಧಾರ ಪೂರ್ಣ ಸರಿಹೊಂದದು. ಅದಕ್ಕೇ ಹೇಳಿರುವರು— *೧೦ ಮಂದಿಯ ಸಲಹೆ ಕೇಳಬೇಕು. ೧೦ರಲ್ಲಿ ಒಂದು ಅಥವಾ ನಮ್ಮದೇ ಆದ ೧೧ನೆಯ  ಅಂತಿಮ ನಿರ್ಣಯ ನಾವೇ ಮಾಡಿಕೊಳ್ಳಬೇಕು* ಎಂದು. ಇನ್ನೊಂದು ಸೂಕ್ತಿಯಂತೆ, *ಇನ್ನೊಬ್ಬರು ಹೇಳಿದ್ದನ್ನು / ಮಾಡಿದ್ದನ್ನು ಸಂಪೂರ್ಣವಾಗಿ ಅದೇ ರೀತಿ ಮಾಡುವುದು ಅನು-ಕರಣೆ. ಅದನ್ನು ಅರ್ಥೈಸಿ, ನಮ್ಮದೇ ಶೈಲಿಯಲ್ಲಿ, ಕೆಲವನ್ನು ಸೇರಿಸಿಕೊಂಡು, ಕೆಲವನ್ನು ಬಿಟ್ಟು, ಮಾಡುವುದು ಅನು-ಸರಣೆ. ಅನುಕರಣೆ ಎಂದೂ ಮಾಡಬಾರದು. ಅನುಸರಣೆ (ಅನುಸರಿಸಿ, ಅದರಂತೆ ಮಾಡುವುದು) ಮಾಡಬಹುದು.* ಅಷ್ಟು ಮಾತ್ರವಲ್ಲ. ತನ್ನ ಏಳಿಗೆ / ಅಭಿವೃದ್ಧಿಯ ದಾರಿಯನ್ನು ತಾನೇ ಸರಿಯಾಗಿ ತಿಳಿ...

ಮರುಳಮುನಿಯನ ಕಗ್ಗದ ಸಂಸ್ಕೃತಕಾವ್ಯಾನುವಾದ ೪

ಮರುಳಮುನಿಯನ ಕಗ್ಗದ ಸಂಸ್ಕೃತಕಾವ್ಯಾನುವಾದ ೪ *ಅಹಿತಹಿತಗಳ ಮೂಲವಿಹುದಹಂಭಾವದಲಿ |* *ಅಹಮೆಂಬುದೆಲ್ಲಕಂ ಬೆಲೆಯ ಕಟ್ಟುವುದು ||* *ಬಹುವಿಧದ ರುಚಿಗಳನು ತೋರಿ ಕರೆಯಲ್ ಪ್ರಕೃತಿ |* *ಸ್ವಹಿತ ನಿಶ್ಚಯ ನಿನದು - ಮರುಳ ಮುನಿಯ || (೬೨೮)* _(ಮೂಲ+ಇಹುದು+ಅಹಂಭಾವದಲಿ)(ಅಹಮ್+ಎಂಬುದು+ಎಲ್ಲಕಂ)_ ಇದು ಬಹಳ ಸರಳವಾದ ಮರುಳಮುನಿಯನ ಕಗ್ಗ. ಡಿವಿಜಿಯವರಿಲ್ಲಿ ತುಂಬ ಸುಲಭವಾದ ಶಬ್ದಗಳಲ್ಲಿ ನಮ್ಮ *ಅಹಂಭಾವ* ದ ಪಾತ್ರವು ಯಾವುದೇ ಸ್ವೀಕಾರ ತಿರಸ್ಕಾರಗಳ ನಿರ್ಣಯದಲ್ಲಿ ಎಷ್ಟು ಮುಖ್ಯವೆಂದು ಹೇಳಿದ್ದಾರೆ. ಅಂದರೆ, *ಅಹಂ* ಎಂಬುದು ಎರಡಲಗಿನ ಚಾಕಿನಂತೆ (double edged sword). ಅದನ್ನು ಉಪಯೋಗಿಸುವವನ ಚಾಕಚಕ್ಯತೆಯಲ್ಲೇ ಅದರ ಔಚಿತ್ಯ-ಅನೌಚಿತ್ಯಗಳು ಅಡಗಿವೆ. ಅಹಂನ ಸದುಪಯೋಗದಿಂದ ಎಷ್ಟೋ ಪ್ರಗತಿಯನ್ನು ಸಾಧಿಸಬಹುದು. ದುರುಪಯೋಗದಿಂದ ಅಷ್ಟೇ ಪತನವನ್ನೂ ಹೊಂದಬಹುದು. ಯಾಕೆಂದರೆ, ಈ ಅಹಂಭಾವವೇ ನಮ್ಮ ಹಿತ-ಅಹಿತಗಳ ಮೂಲ. ಈ ಅಹಮ್ಮೇ ಎಲ್ಲ ವಿಷಯ-ವಸ್ತುಗಳಿಗೆ ಮೌಲ್ಯನಿರ್ಣಾಯಕ. ಯಾವುದರ ಬೆಲೆ ಎಷ್ಟು? ಯಾವುದಕ್ಕೆ ಎಷ್ಟು ಬೆಲೆಕಟ್ಟಬೇಕು? ಎಂಥವರಿಗೆ ಎಷ್ಟು ಬೆಲೆ ಕೊಡಬೇಕು? ಯಾಕೆ? ದುಷ್ಟರಿಗೆ ಹೆಚ್ಚು ಬೆಲೆ ಕೊಟ್ಟರೆ ಪತನ. ಶಿಷ್ಟರಿಗೆ ಹೆಚ್ಚು ಬೆಲೆ ಕೊಟ್ಟರೆ ಪ್ರಗತಿ. ಸತ್ ಮೌಲ್ಯಗಳಾದ ಸತ್ಯ, ನ್ಯಾಯ, ಧರ್ಮ, ಸದಾಚಾರ, ಭಗವತ್ ಶ್ರದ್ಧೆ, ಗೋವು-ದ್ವಿಜ-ಗುರು-ಪ್ರಾಜ್ಞರ ಬಗ್ಗೆ ಸದಾ ಆದರ / ಸದಾ ಗೌರವ,  ಸದ್ಗ್ರಂಥಗಳಾದ ರಾಮಾಯಣ, ಗೀತ...