Posts

Showing posts from 2020

ಚತುರ್ವೇದಗಳಲ್ಲಿ ಅಗ್ನಿದೇವತೆ

  ಚತುರ್ವೇದಗಳಲ್ಲಿ ಅಗ್ನಿದೇವತೆ ಅಗ್ನಿರ್ವೈ ದೇವಾನಾಂ ವ್ರತಪತಿಃ | (ಶತಪಥಬ್ರಾಹ್ಮಣ ೧.೧.೧—೨) "ಹೇ ವ್ರತದ ಪಾಲಕನಾದ ಅಗ್ನಿದೇವನೆ! ಸುಳ್ಳು ಹೇಳುವುದನ್ನು ಬಿಡುವಿಕೆಯೇ ಮುಂತಾದ ರೂಪದ 'ವ್ರತ 'ವನ್ನು ಆಚರಿಸುತ್ತೇನೆ. ಅದನ್ನು ಪೂರೈಸಲು ನಾನು ಶಕ್ತನಾಗುವಂತೆ ಮಾಡು. ನನ್ನದಾದ ಆ ಸತ್ಯವ್ರತವು ಸಮೃದ್ಧವಾಗಲಿ " ಎಂದು ಪ್ರಾರ್ಥಿಸುತ್ತಾ ವೇದರ್ಷಿಯು ಅಗ್ನಿಯೇ ದೇವತೆಗಳೆಲ್ಲರೊಳಗೆ ವ್ರತದ ಅಧಿಪತಿಯಾಗಿರುವನು ಎಂದು ಸ್ತುತಿಸಿರುವನು. ಅಗ್ನಿಯೆಂದರೆ ದೈವೀಸಂಕಲ್ಪದ ಅಧಿದೇವತೆ. ಆತನು ಮಾನವದೇಹದಲ್ಲಿನ ನರಕೋಶಗಳಲ್ಲಿನ  ಕ್ರಿಯಾಶೀಲ ವಿಭವ (Action potential) ದ ರೂಪದಲ್ಲಿ (ವಿದ್ಯುತ್ಕಾಂತೀಯ ತರಂಗದೋಪಾಧಿಯಲ್ಲಿ) ನೆಲೆಸಿದ್ದು ನರಮಂಡಲದಲ್ಲಿ ಮೂಡುವ ದೈವೀಸಂಕಲ್ಪ ಸದೃಶವಾದ ಸತ್ಸಂಕಲ್ಪಗಳ, ಸಚ್ಚಿಂತನೆಗಳ ಹುಟ್ಟಿಗೆ ಕಾರಣನಾಗಿರುವನು. ಹಾಗಾಗಿ, ಆತನನ್ನು ದಿನವೂ ಹೆಚ್ಚು ಹೆಚ್ಚು ಆರಾಧಿಸಿದರೆ ನಮ್ಮ ಚಿಂತನೆಗಳು ಪರಿಶುದ್ಧವೂ ದೈವೀಮಯವೂ ಆಗುವುವು. ಹೀಗೆ ಆತನು ಸದ್ವ್ರತಪತಿಯೆನಿಸುವನು. ಅಂತೆಯೇ ದೇವತಾವ್ರತಾದಿಗಳನ್ನು ಪೂರೈಸಲು ಹೋಮಿಸುವ ಹವಿರ್ದ್ರವ್ಯಗಳನ್ನು ಅವರಿಗೆ ಮುಟ್ಟಿಸುವ ಹವ್ಯವಾಹನನೂ, ದೇವತೆಗಳ ಮುಖರೂಪಿಯೂ ಆಗಿರುವುದರಿಂದಲೂ ಅಗ್ನಿಯು ದೇವತೆಗಳ ವ್ರತಪತಿಯು. ಅಗ್ನಿರ್ವೈ ದೇವಾನಾಂ ನೇದಿಷ್ಠಮ್ | (ಶತಪಥಬ್ರಾಹ್ಮಣ ೧.೫.೧—೧೧) ಅಗ್ನಿಯಾದರೋ ದೇವತೆಗಳಲ್ಲೆಲ್ಲ ನಮಗೆ ಅತ್ಯಂತ ಸನಿಹದವನು, ಬಲುನಿಪುಣನು.  ಅಗ್ನ...

ಶಾಂಕರ ಸುಭಾಷಿತಗಳು

೨೬) ಶಾಂಕರ ಸುಭಾಷಿತಗಳು — ೧ (ಆದಿಶಂಕರ-ಭಗವತ್ಪಾದ-ಪ್ರೋಕ್ತ) ೧. ಮಾನವಜನ್ಮದ ಗುರಿ ಬ್ರಹ್ಮಜ್ಞಾನವೇ ಮಾನವಜನ್ಮದ ಗುರಿ ೧) ತಸ್ಮಾತ್ ಆತ್ಮದರ್ಶನಾಯ ಇಹೈವ ಯತ್ನಃ ಕರಣೀಯಃ ಇತ್ಯರ್ಥಃ | (ಕಾಠಕೋಪನಿಷದ್ಭಾಷ್ಯ ೨-೩-೬) ಆದ್ದರಿಂದ (ಮಾನವನಿಂದ) ಆತ್ಮಜ್ಞಾನಕ್ಕಾಗಿ ಇಲ್ಲಿಯೇ / ಬದುಕಿರುವಾಗಲೇ / ಈ ಜನ್ಮದಲ್ಲಿಯೇ ಪ್ರಯತ್ನವು ಮಾಡಲ್ಪಡಬೇಕೆಂದು ತಾತ್ಪರ್ಯ. ಯಾಕೆಂದರೆ "ಜಂತೂನಾಂ ನರಜನ್ಮದುರ್ಲಭಮ್" — ಜೀವಿಗಳಿಗೆ ಮನುಷ್ಯಜನ್ಮವು ಬಹು ಅಪರೂಪದಿಂದ ದೊರಕಬಹುದಾದ ಅತ್ಯಂತಪವಿತ್ರವೂ ಶ್ರೇಷ್ಠವೂ ಆದ ಜನ್ಮವು. ಇದು ಪಶುಪಕ್ಷಿಗಳಂತೆ ಕೇವಲ ಉಂಡು, ಕುಡಿದು ತೇಗುವುದಕ್ಕೆ ಬಂದ ಭೋಗಯೋನಿಯಲ್ಲ; ಪರಂತು ದೇವತೆಗಳಿಗೂ ದುರ್ಲಭವಾದ ಮೋಕ್ಷವನ್ನು / ಸರ್ವಾತ್ಮಭಾವರೂಪವಾದ ಬ್ರಹ್ಮಾನಂದವನ್ನು ಪಡೆದು ಕೃತಾರ್ಥನಾಗುವುದಕ್ಕಾಗಿ ಬಂದಿರುತ್ತದೆ. ಬ್ರಹ್ಮಾತ್ಮಜ್ಞಾನದಿಂದಲೇ ಶಾಶ್ವತ ಅಂತಿಮ ಅದ್ವೈತ ಸಾಯುಜ್ಯ ಮೋಕ್ಷದ ಪ್ರಾಪ್ತಿಯೇ ಹೊರತು ಬೇರೆ ದಾರಿಯೇ ಇಲ್ಲ. ("ನ ಅನ್ಯಃ ಪಂಥಾ ವಿದ್ಯತೇ ಅಯನಾಯ") ಸ್ವರ್ಗಕ್ಕೆ ಹೋದರೂ ಆತ್ಮಜ್ಞಾನಕ್ಕೆ ಅವಕಾಶವಿಲ್ಲ; ಇನ್ನು ಕ್ರಿಮಿಕೀಟಾದಿ ನೀಚಯೋನಿಗಳಲ್ಲಂತೂ ಅದರ ಪ್ರಶ್ನೆಯೇ ಇಲ್ಲ. ಆದ್ದರಿಂದ ಹೇಗಾದರೂ ಪ್ರಯತ್ನಮಾಡಿ ಈ ಜನ್ಮದಲ್ಲಿಯೇ ಆತ್ಮಜ್ಞಾನವನ್ನು ಪಡೆಯುವ ಸಾಹಸವನ್ನು ಮಾಡಬೇಕೆಂಬುದೇ ಶ್ರೀಶಂಕರರ ಪ್ರೀತಿಯ ಸಂದೇಶ. ಮಾನವನು ಮಾಧವನಾಗಬೇಕು ೨) ವಿಶುದ್ಧಾಂತಃಕ...

ವೈದಿಕಸುಭಾಷಿತಗಳಲ್ಲಿ "ಯಜ್ಞ"

ವೈದಿಕಸುಭಾಷಿತಗಳಲ್ಲಿ "ಯಜ್ಞ"   (ನಾಲ್ಕೂ ವೇದಗಳಿಂದಾಯ್ದ ಯಜ್ಞಸಂಬಂಧಿ ನುಡಿಮುತ್ತುಗಳು) ಅ ೧) ಅಗ್ನಿಂ ಸ್ತೋಮೇನ ಬೋಧಯ | (ತೈ.ಕೃಯ.ಸಂ.೪.೧.೧೧, ಶು.ಯ.ಸಂ.೨೨.೧೫) (ಕರ್ಮಪರ—)ಹೇ ಮನುಜನೆ! ಯಜ್ಞಾಗ್ನಿಯನ್ನು ಸ್ತೋತ್ರಪೂರ್ವಕವಾಗಿ (ಸ್ತೋಮ―ಸ್ತೋತ್ರ), ಇಂಧನಸಮೂಹದ (ಸ್ತೋಮ―ಸಮೂಹ) ಸಹಾಯದಿಂದ ಉದ್ದೀಪ್ತಗೊಳಿಸು / ಬೆಳಗಿಸು. (ಆಧಿಭೌತಿಕ— )ಹೇ ನರನೆ!! ಬೆಂಕಿಯನ್ನು ಗಾಳಿಹಾಕಿ ಹೊಗಳುತ್ತಾ ಉರಿಸು. ಬೆಂಕಿಯ / ಅಗ್ನಿಯ  ಸ್ವರೂಪವನ್ನು ಯಜ್ಞದಿಂದ ತಿಳಿದುಕೊ (ಸ್ತೋಮ―ಯಜ್ಞ). (ಆಧಿದೈವಿಕ, ಆಧ್ಯಾತ್ಮಿಕ— ) ಹೇ ಮನುಷ್ಯನೆ!!! ಅಗ್ನಿರೂಪಿಯಾಗಿ ದೇದೀಪ್ಯಮಾನವಾಗಿ ಬೆಳಗುವ, ಸರ್ವಾಗ್ರಗಣ್ಯನೂ, ಸರ್ವಾಗ್ರಣಿಯೂ ಆಗಿ ಅಗ್ನಿಯೆನಿಸಿದ ಪರಬ್ರಹ್ಮ ಪರಮಾತ್ಮ ಭಗವಂತ ಪರಮೇಶ್ವರನನ್ನು ವೇದದ ಸ್ತೋಮಮಂತ್ರಗಳಿಂದ / ಸ್ತುತಿಪರವಾದ ಮಂತ್ರಗಳ ಪಠನೆಯ ಮೂಲಕ ನಿನ್ನೊಳಗೆ ಜಾಗೃತಗೊಳಿಸಿಕೊ, ಆತ್ಮಬೋಧೆಯನ್ನು / ಬ್ರಹ್ಮಜ್ಞಾನವನ್ನು ಹೊಂದಿದ ಜಾಗೃತಾತ್ಮನಾಗು. ೨) ಅಗ್ನಿಃ ಸರ್ವಾ ದೇವತಾ ವಿಷ್ಣುರ್ಯಜ್ಞೋ ದೇವತಾಶ್ಚೈವ ಯಜ್ಞಂ ಚಾऽऽರಭತೇऽಗ್ನಿರವಮೋ ದೇವಾನಾಂ ವಿಷ್ಣುಃ ಪರಮಃ | (ತೈ.ಬ್ರಾ.) ಎಲ್ಲ ದೇವತೆಗಳೂ, ಅಗ್ನಿಯೂ, ವಿಷ್ಣುವೂ ಯಜ್ಞಸ್ವರೂಪರು. ದೇವತೆಗಳೇ ಮೊದಲು ಯಜ್ಞವನ್ನಾರಂಭಿಸಿದರು. ಅಗ್ನಿಯು ಅತ್ಯಂತ ಕೆಳಸ್ತರದ, ಭೂಸ್ತರದ ಪ್ರತ್ಯಕ್ಷದೇವತೆ. ವಿಷ್ಣುವು ಅತ್ಯಂತ ಮೇಲ್ಮಟ್ಟದ, ಸತ್ಯಲೋಕಕ್ಕೂ ಮೇಲಿನ ವೈಕುಂಠಲೋಕವಾಸಿಯಾದ...