ಸುಭಾಷಿತರತ್ನಭಾಂಡಾಗಾರಃ (ಕನ್ನಡಾನುವಾದ ಸಹಿತ) ೧
ಸುಭಾಷಿತರತ್ನಭಾಂಡಾಗಾರ ೧
(ಕನ್ನಡಾನುವಾದ ಸಹಿತ)
೧. ಪರಬ್ರಹ್ಮಸ್ತುತಿ:
ಅಥ ಸ್ವಸ್ಥಾಯ ದೇವಾಯ |
ನಿತ್ಯಾಯ ಹತಪಾಪ್ಮನೇ ||
ತ್ಯಕ್ತಕ್ರಮವಿಭಾಗಾಯ |
ಚೈತನ್ಯಜ್ಯೋತಿಷೇ ನಮ: ||೧||
"(ಸ್ವಸ್ಥಾಯ- ಸ್ವಸ್ಮಿನ್ ಸ್ಥಿತ: ಸ್ವಸ್ಥ:, ತಸ್ಮೈ)ತನ್ನಲ್ಲೇ ತಾನು,ತನ್ನ ಮೂಲಸ್ವರೂಪದಲ್ಲಿ ನೆಲೆನಿಂತ, (ದೇವಾಯ-ದೀವ್ಯತಿ ಇತಿ ದೇವ:,ತಸ್ಮೈ)ತನ್ನ ಸ್ವಂತ ಪ್ರಕಾಶದಿಂದ ಬೆಳಗುತ್ತಿರುವ, (ನಿತ್ಯಾಯ)ನಿತ್ಯಸತ್ಯಶಾಶ್ವತನಾದ, (ಹತಪಾಪ್ಮನೇ)ಪಾಪಗಳನ್ನು ನಾಶಮಾಡುವ, (ತ್ಯಕ್ತಕ್ರಮವಿಭಾಗಾಯ)ಯಾವುದೇ ಕ್ರಮ,ವಿಭಾಗಾದಿಗಳಿಂದ ಕೂಡಿರದ,ಯಾವುದೇ ಮಿತಿಗಳಿಲ್ಲದ,ಯಾವುದೇ ವಿಧಿವಿಧಾನಗಳಿಂದ ಅತೀತನಾದ,(ಚೈತನ್ಯಜ್ಯೋತಿಷೇ ನಮ:)ಶಕ್ತಿಸ್ವರೂಪನೂ, ಜ್ಯೋತಿ/ಬೆಳಕಿನ ಸ್ವರೂಪನೂ ಆದ ಪರಬ್ರಹ್ಮಕ್ಕೆ,(ಅಥ ನಮ:) ಈಗ ವಂದನೆಗಳು.
ದಿಕ್ಕಾಲಾದ್ಯನವಚ್ಛಿನ್ನಾ-
ನನ್ತಚಿನ್ಮಾತ್ರಮೂರ್ತಯೇ |
ಸ್ವಾನುಭೂತ್ಯೇಕಮಾನಾಯ
ನಮ: ಶಾನ್ತಾಯ ತೇಜಸೇ ||೨||
(ದಿಕ್ಕಾಲಾದಿ+ಅನವಚ್ಛಿನ್ನ+ಅನನ್ತ+ಚಿನ್ಮಾತ್ರಮೂರ್ತಯೇ)ದಿಕ್ಕು,ಕಾಲಾದಿಗಳಿಂದ ಅಬಾಧಿತವಾದ,ಅನ್ತ್ಯವಿಲ್ಲದ ಚಿನ್ಮಯಸ್ವರೂಪನಾದ,(ಸ್ವಾನುಭೂತಿ+ಏಕಮಾನಾಯ)ಸ್ವಾನುಭೂತಿ/ಸ್ವಾನುಭವವೊಂದೇ ಪ್ರಮಾಣವಾಗಿರುವಂತಹ,(ಶಾನ್ತಾಯ ತೇಜಸೇ)ಶಾಂತಸ್ವರೂಪನೂ, ಅಗ್ನಿಯಂತೆ ನಿತ್ಯಶುದ್ಧಸ್ವರೂಪನೂ,ಬೆಳಗುತ್ತಿರುವವನೂ,ತೇಜೋಮೂರ್ತಿಯೂ ಆದ ಪರಬ್ರಹ್ಮನಿಗೆ,(ನಮ:)ನಮಸ್ಕಾರಗಳು.
ಅನನ್ತನಾಮಧೇಯಾಯ
ಸರ್ವಾಕಾರವಿಧಾಯಿನೇ |
ಸಮಸ್ತಮನ್ತ್ರವಾಚ್ಯಾಯ
ವಿಶ್ವೈಕಪತಯೇ ನಮ: ||೩||
ಲೆಕ್ಕವಿಲ್ಲದಷ್ಟು ಹೆಸರುಗಳಿರುವ, ಎಲ್ಲಾ ಆಕಾರಗಳಿಗೂ ಮೂಲಕಾರಣನಾದ, ಸರ್ವಮಂತ್ರಗಳಿಂದಲೂ ಸ್ತುತಿಸಲ್ಪಡುವ, ಇಡೀ ವಿಶ್ವದ ಏಕೈಕ ನಾಥನಾದ ಪರಬ್ರಹ್ಮನಿಗೆ ನಮಸ್ಕಾರ.
ಕರ್ಣಿಕಾದಿಷ್ವಿವ ಸ್ವರ್ಣ-
ಮರ್ಣವಾದಿಷ್ವಿವೋದಕಮ್ |
ಭೇದಿಷ್ವಭೇದಿ ಯತ್ತಸ್ಮೈ
ಪರಸ್ಮೈ ಮಹಸೇ ನಮ: ||೪||
(ಕರ್ಣಿಕಾದಿಷು ಸ್ವರ್ಣಂ ಇವ)ಕಿವಿಗಳಲ್ಲಿ ಸಹಜವಾಗಿ ಚಿನ್ನಾಭರಣಗಳಿರುವಂತೆ, (ಅರ್ಣವಾದಿಷು ಉದಕಂ ಇವ)ಸಾಗರಾದಿಗಳಲ್ಲಿ ಸಹಜವಾಗಿ ಜಲರಾಶಿಯಿರುವಂತೆ, (ಭೇದಿಷು ಅಭೇದಿ ಯತ್)ತುಂಡಾಗುವ ಗುಣವಿರುವ ಎಲ್ಲದರಲ್ಲಿ ಸಹಜವಾಗಿ ತುಂಡಾಗದಿರುವ,ಅಭೇದ್ಯವಾದ ಯಾವುದಿದೆಯೋ,ಯಾವನಿದ್ದಾನೋ (ಮಹಸೇ)ಪರಮಾನಂದನೂ,ಸರ್ವಶಕ್ತನೂ ಆದ (ಪರಸ್ಮೈ) ಪರಾತ್ಪರ ಪರಬ್ರಹ್ಮನಿಗೆ (ನಮ:)ನಮಸ್ಕಾರ.
ನಮೋ ವಾಙ್ಮನಸಾತೀತ-
ಮಹಿಮ್ನೇ ಪರಮೇಷ್ಠಿನೇ |
ತ್ರಿಗುಣಾಷ್ಟಗುಣಾನನ್ತ-
ಗುಣನಿರ್ಗುಣಮೂರ್ತಯೇ ||೫||
[ವಾಕ್+ಮನಸ:(ಅನುನಾಸಿಕ ಸಂಧಿ)=ವಾಙ್ಮನಸ:+ಅತೀತಮಹಿಮ್ನೇ=ವಾಙ್ಮನಸ ಅತೀತಮಹಿಮ್ನೇ(ವಿಸರ್ಗಲೋಪ ಸಂಧಿ)ವಾಙ್ಮನಸ+ಅತೀತಮಹಿಮ್ನೇ=ವಾಙ್ಮನಸಾತೀತಮಹಿಮ್ನೇ(ಸವರ್ಣದೀರ್ಘಸಂಧಿ)]ಮಾತು-ಮನಸ್ಸುಗಳಿಗೆ ನಿಲುಕದ ಮಹಿಮಾಯುತನಾದ, (ಪರಮೇಷ್ಠಿನೇ)ಅತ್ಯಂತ ಶ್ರೇಷ್ಠನಾದ, {ತ್ರಿಗುಣ+ಅಷ್ಟಗುಣ+ಅನಂತಗುಣ+ನಿರ್ಗುಣ+ಮೂರ್ತಯೇ=ತ್ರಿಗುಣಾ(ಸ.ದೀ.ಸಂ.)ಷ್ಟಗುಣಾ(ಸ.ದೀ.ಸಂ.)ನಂತಗುಣ(ಪ್ರಕೃತಿಭಾವಸಂಧಿ= ಸಂಧಿಯ ನಂತರವೂ ಸಂಧಿಪೂರ್ವದಂತೆಯೇ ವಿಕೃತಿಯಾದೇ ಉಳಿಯುವುದು)ನಿರ್ಗುಣ(ಪ್ರ.ಭಾ.ಸಂ.)ಮೂರ್ತಯೇ}ಸತ್ವ,ರಜ,ತಮಾದಿ ತ್ರಿಗುಣರೂಪನೂ,ಸೃಷ್ಟಿ-ಸ್ಥಿತಿ-ಲಯ-ತಿರೋಧಾನ-ನಿಗ್ರಹ-ಅನುಗ್ರಹ-ಸಾಕಾರ-ನಿರಾಕಾರಾದಿ ಅಷ್ಟಗುಣಪೂರ್ಣನೂ,ಅಂತ್ಯವಿಲ್ಲದಷ್ಟು ಅಸಂಖ್ಯ ಗುಣಭರಿತನೂ, ಅಲ್ಲದೆ, ಸಕಲಗುಣಾತೀತನೂ,ನಿರ್ಗುಣಸ್ವರೂಪನೂ ಆಗಿರುವ ಆ ಮೂಲಪರಬ್ರಹ್ಮತತ್ವಕ್ಕೆ ನಮೋ ನಮ: .
ಯಥಾ ತಥಾಪಿ ಯ: ಪೂಜ್ಯೋ
ಯತ್ರ ತತ್ರಾಪಿ ಯೋsರ್ಚಿತ: |
ಯೋsಪಿ ವಾ ಸೋsಪಿ ವಾ ಯೋsಸೌ
ದೇವಸ್ತಸ್ಮೈ ನಮೋsಸ್ತು ಮೇ ||೬||
(ಯಥಾ ತಥಾಪಿ ಯ: ಪೂಜ್ಯ:)ಯಾರು ಹೀಗೂ ಹಾಗೂ ಅರ್ಥಾತ್ ವಿವಿಧ ವಿಧಿ-ವಿಧಾನಗಳಿಂದ ಪೂಜಿಸಲ್ಪಡುತ್ತಾನೋ, (ಯತ್ರ ತತ್ರಾಪಿ ಯ: ಅರ್ಚಿತ:) ಎಲ್ಲೆಂದರಲ್ಲಿ, ಎಲ್ಲೆಲ್ಲೂ ಯಾವನು ಅರ್ಚಿಸಲ್ಪಡುವನೋ, (ಯ: ಅಪಿ ವಾ ಸ: ಅಪಿ ವಾ ಯ: ಅಸೌ) ಯಾವನೋ ಅಥವಾ ಅವನೋ, ಹೀಗೆ ಕಣ್ಣಿಗೆ ಕಾಣದಿದ್ದರೂ ಅವನು (ದೇವ:) ಯಾವ ದೇವರೂ ಆಗಿರಲಿ, (ತಸ್ಮೈ ಮೇ/ಮಮ ನಮ: ಅಸ್ತು) ಅವನಿಗೆ ನನ್ನ ನಮಸ್ಕಾರವಿರಲಿ.
ನಮ: ಸ್ವತನ್ತ್ರಚಿಚ್ಛಕ್ತಿ-
ಮುದ್ರಿತಸ್ವವಿಭೂತಯೇ |
ಅವ್ಯಕ್ತವ್ಯಕ್ತರೂಪಾಯ
ಕಸ್ಮೈಚಿನ್ಮನ್ತ್ರಮೂರ್ತಯೇ ||೭||
(ಅವ್ಯಕ್ತ-ವ್ಯಕ್ತರೂಪಾಯ)ಕಾಣದಿರುವ ನಿರಾಕಾರನೂ ಹಾಗೂ ಕಾಣುವ ಪ್ರಕೃತಿ,ಸತ್ಪುರುಷ,ಸಂತರೇ ಮೊದಲಾದ ವ್ಯಕ್ತರೂಪನೂ ಆಗಿರುವ (ಕಸ್ಮೈಚಿತ್ ಮನ್ತ್ರಮೂರ್ತಯೇ)ಯಾವುದೋ ಮನ್ತ್ರಪ್ರತಿಪಾದ್ಯಸ್ವರೂಪನಾದ (ಸ್ವತನ್ತ್ರಚಿಚ್ಛಕ್ತಿ-
ಮುದ್ರಿತ-ಸ್ವವಿಭೂತಯೇ) ತನ್ನದೇ ಆದ ಪ್ರಕಾಶವುಳ್ಳ ಜ್ಞಾನಮಯ ಸಾಮರ್ಥ್ಯದಿಂದ ತನ್ನ ಮಹಿಮಾವಿಭೂತಿಗಳನ್ನು ಪ್ರಕಟಿಸುವ ಪರಬ್ರಹ್ಮನಿಗೆ (ನಮ:)ನಮಸ್ಕಾರ.
ಚರಾಚರಜಗತ್ಸ್ಫಾರಸ್ಫುರತ್ತಾಮಾತ್ರಧರ್ಮಿಣೇ |
ದುರ್ವಿಜ್ಞೇಯರಹಸ್ಯಾಯ ಯುಕ್ತೈರಪ್ಯಾತ್ಮನೇ ನಮ: ||೮||
ಚರಾಚರಜಗತ್ತಿನ ವಿಸ್ತೃತವಾದ ಹೊಳಪೇ ತನ್ನ ಧರ್ಮವಾಗಿರುವ, ಯೋಗಿಗಳಿಂದಲೂ ತಿಳಿಯಲು ಕಠಿಣವಾದ ರಹಸ್ಯತತ್ತ್ವಸ್ವರೂಪನಾದ ಆ ಅಂತರಾತ್ಮನಿಲಯನಾದ ಪರಮಾತ್ಮನಿಗೆ ನಮಸ್ಕಾರ.
ಭವಬೀಜಾಙ್ಕುರಜಲದಾ ರಾಗಾದ್ಯಾ: ಕ್ಷಯಮುಪಾಗತಾ ಯಸ್ಯ |
ಬ್ರಹ್ಮಾ ವಾ ವಿಷ್ಣುರ್ವಾ ಹರೋ ಜಿನೋ ವಾ ನಮಸ್ತಸ್ಮೈ ||೯(९)||
ಈ ಭವ/ಸಂಸಾರವೆಂಬ ಬೀಜವಂಕುರಿಸಲು ನೀರೆರೆವ ಕಾಮಕ್ರೋಧಲೋಭಮೋಹಮದಮಾತ್ಸರ್ಯಾದಿ (ಅರಿಷಡ್ವರ್ಗ)ರಾಗದ್ವೇಷಗಳು ಯಾರಲ್ಲಿ ಕ್ಷಯಿಸಿ ನಾಶವಾಗಿ ಹೋಗಿವೆಯೋ, ಅಂಥವನು ಬ್ರಹ್ಮಾ,ವಿಷ್ಣು,ಹರ,ಜಿನ- ಇವರ್ಯಾರೇ ಆಗಿರಲಿ/ಈ ಯಾವ ಹೆಸರಿಂದಲೂ ಕರೆಯಲ್ಪಡಲಿ, ಅವನಿಗೆ ನಮಸ್ಕಾರ.
ನಿತ್ಯ-ನಿರಾವೃತಿ-ನಿಜಾನುಭವೈಕಮಾನ-

-ಮಾನಂದಧಾಮ-ಜಗದಙ್ಕುರಬೀಜಮೇಕಮ್ |
ದಿಗ್ದೇಶಕಾಲಕಲನಾದಿಸಮಸ್ತಹಸ್ತ-
ದಿಗ್ದೇಶಕಾಲಕಲನಾದಿಸಮಸ್ತಹಸ್ತ-
-ಮರ್ದಾ ಸಹ ದಿಶತು ಶರ್ಮ ಮಹನ್ಮಹೋ ವ: ||೧೦||
ನಿತ್ಯನೂ, ಮಾಯಾವರಣರಹಿತನೂ, ನಿಜಸಾಧನೆಗೆ ಅನುಭವಗಮ್ಯಮಾತ್ರನಾದವನೂ, ಪರಮಾನಂದದ ಮೂಲಸ್ಥಾನನೂ, ಜಗತ್ತಿನ ಸೃಷ್ಟಿಯೆಂಬ ಅಂಕುರ/ಮೊಳಕೆಯೊಡೆಯಲು ಏಕಕಾರಣಬೀಜನೂ ಆದ ಪರಬ್ರಹ್ಮನು, ದಿಕ್ಕು-ದೇಶ-ಕಾಲಗಣನೆಯೇ ಮುಂತಾದ ಮಹಾ ಮಹಾರಹಸ್ಯಸಮಸ್ತವನ್ನೂ ಅಂಗೈಯಲ್ಲೇ ಕಂಡಂತೆ ಸ್ಪಷ್ಟವಾಗಿ ತಿಳಿವಂತೆಯೂ, ಸುಖನೆಮ್ಮದಿಗಳನ್ನೂ ಸಹ ನಿಮಗೆ ತೋರಿಕೊಡಲಿ.

ಲೋಕತ್ರಯಸ್ಥಿತಿಲಯೋದಯಕೇಲಿಕಾರಃ
ಕಾರ್ಯೇಣ ಯೋ ಹರಿಹರದ್ರುಹಿಣತ್ವಮೇತಿ ।
ದೇವಃ ಸ ವಿಶ್ವಜನವಾಙ್ಮನಸಾತಿವೃತ್ತ-
-ಶಕ್ತಿಃ ಶಿವಂ ದಿಶತು ಶಶ್ವದನಶ್ವರಂ ವಃ ॥೧೧॥
(ವಸನ್ತತಿಲಕಾವೃತ್ತಮ್)*
ಯಃ - ಯಾವನು,
ಲೋಕ-ತ್ರಯ-ಸ್ಥಿತಿ-ಲಯ-ಉದಯ-ಕೇಲಿ-ಕಾರಃ -
ಮೂರುಲೋಕಗಳ (ಊರ್ಧ್ವ-ಮಧ್ಯ-ಅಧೋಲೋಕಗಳ) ಸೃಷ್ಟಿ-ಸ್ಥಿತಿ-ಲಯಗಳನ್ನು ಕೇವಲ ಆಟದಂತೆ ನಿರ್ವಹಿಸುವವನಾಗಿರುವನೋ,
ಕಾರ್ಯೇಣ - ಈ ವಿಭಿನ್ನ ಕಾರ್ಯಗಳಿಂದ/ ಕಾರ್ಯಗಳಿಗಾಗಿ,
ಹರಿ-ಹರ-ದ್ರುಹಿಣತ್ವಮ್ - ಬ್ರಹ್ಮಾ,ಹರಿ,ಹರರ ರೂಪವನ್ನು,
ಏತಿ - ಹೊಂದುತ್ತಾನೋ/ತಾಳುತ್ತಾನೋ,
ಸಃ - ಆ / ಅಂತಹ,
ವಿಶ್ವಜನ-ವಾಕ್-ಮನಸಾ-ಅತಿವೃತ್ತ- ಶಕ್ತಿಃ -
ಜಗದ ಜನರ ಮಾತು-ಮನಗಳಿಗೆ ನಿಲುಕದ, ಅವನ್ನು ಮೀರಿದ ಶಕ್ತಿಯುಳ್ಳ,
ದೇವಃ - ಮಿತಿಯಿಲ್ಲದ ಸ್ವಪ್ರಭೆಯಿಂದ ಬೆಳಗುವ ದೇವನು,
ವಃ - (ಯುಷ್ಮಭ್ಯಮ್) ನಿಮಗೆ,
ಶಶ್ವತ್-ಅನಶ್ವರಮ್ - ಶಾಶ್ವತತಮವೂ, ನಶ್ವರವಲ್ಲದುದೂ, ನಿತ್ಯವೂ ಆದ,
ಶಿವಮ್ - ಮಂಗಳ/ಶುಭವನ್ನು,
ದಿಶತು - ತೋರಿಸಲಿ, ಉಂಟುಮಾಡಲಿ, ಆ ದೆಸೆ/ ದಿಕ್ಕಿನೆಡೆಗೆ ನಿಮ್ಮನ್ನು ಕೊಂಡೊಯ್ಯಲಿ.
* “ಉಕ್ತಾ ವಸನ್ತತಿಲಕಾ ತಭಜಾ ಜಗೌಗಃ॥”
ಸರ್ವಃ ಕಿಲಾಯಮವಶಃ ಪುರುಷಾಣುಕರ್ಮ-
ಕಾಯಾದಿಕಾರಣಗಣೋ ಯದನುಗ್ರಹೇಣ ।
ವಿಶ್ವಪ್ರಪಂಚರಚನಾಚತುರತ್ವಮೇತಿ
ಸ ತ್ರಾಯತಾತ್ತ್ರಿಭುವನೈಕಮಹೇಶ್ವರೋ ವಃ ॥೧೨॥
ಅಯಂ - ಈ,
ಅವಶಃ - ಪರಾಧೀನವಾದ,
ಸರ್ವಃ - ಎಲ್ಲ,
ಪುರುಷ-ಅಣು-ಕರ್ಮ-ಕಾಯ-ಆದಿಕಾರಣ-ಗಣಃ - ಜೀವ, ಅಣು, ರೇಣು, ತೃಣ, ಕಾಷ್ಠ, ಕರ್ಮ, ದೇಹ - ಇವುಗಳ ಆದಿಕಾರಣವಾದ ಪಂಚಭೂತಸಮೂಹವಾದ ಪ್ರಕೃತಿಯು,
ಯತ್-ಅನುಗ್ರಹೇಣ ಕಿಲ - (ಯಸ್ಯ ಅನುಗ್ರಹೇಣ) ಯಾವನ ಕೃಪಾಮಾತ್ರದಿಂದಲೇ,
ವಿಶ್ವ-ಪ್ರಪಂಚ-ರಚನಾ-ಚತುರತ್ವಮ್ ಏತಿ - ಪಂಚೀಕರಣಾದಿ ಪ್ರಕ್ರಿಯೆಗಳ ಮೂಲಕ ವಿಶ್ವವನ್ನು ನಿರ್ಮಿಸುವ ಚಾತುರ್ಯವನ್ನು (ಚತುರತೆಯನ್ನು) ಹೊಂದುತ್ತದೆಯೋ,
ಸಃ - ಅಂತಹ,
ತ್ರಿಭುವನ-ಏಕ-ಮಹೇಶ್ವರಃ - ಮೂರ್ಲೋಕಗಳಿಗೆ ಏಕಮೇವ ಅಧಿಪತಿಯಾದ ಮಹೇಶ್ವರನು/ ಪರಮಾತ್ಮನು,
ವಃ - (ಯುಷ್ಮಾನ್) ನಿಮ್ಮನ್ನು,
ತ್ರಾಯತಾತ್ - (ತ್ರಾತು) ರಕ್ಷಿಸಲಿ.
Comments
Post a Comment