ದೇವೀಭಾಗವತಸ್ಥ ಸುಭಾಷಿತಗಳು देवीभागवतस्थ-सुभाषितानि
ದೇವೀಭಾಗವತಸ್ಥ ಸುಭಾಷಿತಗಳು देवीभागवतस्थ-सुभाषितानि ॥ ॐ श्रीगुरुगणपतिभ्यां नमः ॥ ॥ उमामहेश्वरः प्रसीदतु ॥ || ಶ್ರೀಗುರುಗಣಪತಿಭ್ಯಾಂ ನಮಃ || || ಉಮಾಮಹೇಶ್ವರಃ ಪ್ರಸೀದತು || श्रोत्रेन्द्रिय-युतात् सूत, नराः स्वादु विचक्षणाः । न शृण्वन्ति पुराणानि, वञ्चिता विधिना हि ते ॥१।१।८॥ ಶ್ರೋತ್ರೇನ್ದ್ರಿಯ-ಯುತಾತ್ ಸೂತ, ನರಾಃ ಸ್ವಾದು ವಿಚಕ್ಷಣಾಃ । ನ ಶೃಣ್ವನ್ತಿ ಪುರಾಣಾನಿ, ವಞ್ಚಿತಾ ವಿಧಿನಾ ಹಿ ತೇ ॥೧।೧।೮॥ ಅಯ್ಯಾ ಸೂತಮುನಿಯೆ! ಶ್ರವಣೇಂದ್ರಿಯವು ಸಕ್ಷಮವಾಗಿದ್ದು (ಚೆನ್ನಾಗಿ ಕಿವಿಗಳು ಕೇಳಿಸುತ್ತಿದ್ದರೂ), ಸದಸದ್ವಿವೇಕಶಕ್ತಿ (ಒಳ್ಳೆಯದು, ಕೆಟ್ಟದ್ದು ಮುಂತಾದ ಭೇದಜ್ಞಾನ) ಇದ್ದೂ ಕೂಡ ಯಾವ ಮನುಜರು ಪುರಾಣಗಳ ಅಮೃತವಾಣಿಯನ್ನು ಶ್ರವಣಮಾಡದಿದ್ದರೆ, ಅಂಥವರು ನಿಜವಾಗಿಯೂ ಆ ವಿಧಿಯಿಂದಲೇ ವಂಚಿತರಾದಂತೆಯೇ ಸರಿ. यथा जिह्वेन्द्रियाह्लादः, षड्रसैः संप्रपद्यते । तथा श्रोत्रोन्द्रियाह्लादो, वचोभिः सुधियां स्मृतः ॥१।१।९॥ ಯಥಾ ಜಿಹ್ವೇನ್ದ್ರಿಯಾಹ್ಲಾದಃ, ಷಡ್ರಸೈಃ ಸಂಪ್ರಪದ್ಯತೇ । ತಥಾ ಶ್ರೋತ್ರೋನ್ದ್ರಿಯಾಹ್ಲಾದೋ, ವಚೋಭಿಃ ಸುಧಿಯಾಂ ಸ್ಮೃತಃ ॥೧।೧।೯॥ ಹೇಗೆ ನಾಲಗೆಗೆ / ರಸನೇಂದ್ರಿಯಕ್ಕೆ ಸಿಹಿ, ಕಹಿ, ಉಪ್ಪು, ಹುಳಿ, ಖಾರ, ಒಗರು ಎಂಬ ಷಡ್ರಸಗಳಿಂದ ಆಹ್ಲಾದ / ಆನಂದ / ತೃಪ್ತಿ ಉಂಟಾಗುತ್ತದೋ, ಹಾಗೆಯೇ ಸುಜ್ಞಾನಿಗಳ ಮಾತುಗಳಿಂದ ಶ್ರೋತ್ರೇಂದ್ರಿಯ / ಕಿವಿಗಳಿಗೆ ಆಹ್...