श्रीभास्करगोविन्दशर्मविरचितं
वैद्यकीयसुभाषितसाहित्यम्
प्रथमोऽध्यायः
अथातो वैद्यकशास्त्रविज्ञानीयमध्यायं व्याख्यास्यामः ।
आयुर्वेदव्याख्या (ಆಯುರ್ವೇದವ್ಯಾಖ್ಯೆ)
हिताहितं सुखं दुःखमायुस्तस्य हिताहितम् ।
मानं च तच्च यत्रोक्तमायुर्वेदः स उच्यते ॥१॥
(चरकसंहिता)
हित-अहितं— ಹಿತಕರ, ಅಹಿತಕರ; सुखं— ಸುಖ (ಆರೋಗ್ಯ)ಕರ; दुःखम्— ದುಃಖ(ಅನಾರೋಗ್ಯ)ಕರ (इति— ಎಂಬುದಾಗಿ); आयुः— ಆಯುಷ್ಯ / ಬದುಕು (जीवितं चतुर्विधानुभवदायकम् अस्ति ।— ನಾಲ್ಕು ತೆರನಾದ ಅನುಭವವನ್ನು ಕೊಡುವಂಥದ್ದಾಗಿದೆ.) च— ಹಾಗೆಯೇ; तस्य— ಈ ಆಯುಸ್ಸಿಗೆ / ಬದುಕಿಗೆ; हित- अहितम्— ಹಿತ-ಅಹಿತಗಳು; तत्+च— ( तस्य च) ಹಾಗೂ ಅದರ / ಆಯುಸ್ಸಿನ; मानं— ಮಾನವು / ಪ್ರಮಾಣವು / ಅವಧಿಯ ಅಳತೆಯು; यत्र— ಎಲ್ಲಿ / ಯಾವುದರಲ್ಲಿ; उक्तं— ಹೇಳಲ್ಪಟ್ಟಿದೆಯೋ / ಉಕ್ತವಾಗಿದೆಯೋ; सः आयुर्वेदः (इति) उच्यते— ಅದು ಆಯುರ್ವೇದ (ಎಂದು) ಹೇಳಲ್ಪಡುತ್ತದೆ.
शुद्धिशास्त्राणि (ಶುದ್ಧಿಶಾಸ್ತ್ರಗಳು)
कायवाग्बुद्धिविषया ये मलाः समुपस्थिताः ।
चिकित्सालक्षणाध्यात्मशास्त्रैस्तेषां विशुद्धयः ॥२॥
(वाक्यपदीयम्)
काय-वाक्-बुद्धिविषयाः ये मलाः सम्-उपस्थिताः, चिकित्सा(रुक्प्रतिक्रिया - अमरकोशे)-लक्षण(व्याकरण)-अध्यात्मशास्त्रैः तेषां (मलानां) विशुद्धयः (सम्भवन्ति) ॥
ದೇಹದ ರೋಗಗಳನ್ನು ಚಿಕಿತ್ಸಾಶಾಸ್ತ್ರವು ಗುಣಪಡಿಸುತ್ತದೆ. ಮಾತಿನ / ಭಾಷೆಯ ದೋಷವನ್ನು ವ್ಯಾಕರಣಶಾಸ್ತ್ರವು ಸರಿಪಡಿಸುತ್ತದೆ. ಬುದ್ಧಿಯ ಕೊಳೆ(ಪ್ರಜ್ಞಾ-ಅಪರಾಧವು ಶಾರೀರಿಕ-ಮಾನಸಿಕರೋಗಗಳ ಮೂಲ)ಯನ್ನು ಅಧ್ಯಾತ್ಮಶಾಸ್ತ್ರವು ಹೋಗಲಾಡಿಸುತ್ತದೆ. ಆಯುರ್ವೇದವು ಈ ಆಧ್ಯಾತ್ಮಿಕ ಆಯಾಮವನ್ನೂ ಹೊಂದಿದೆ.
वैद्यशास्त्रसार्वकालिकफलत्वम् (ವೈದ್ಯಶಾಸ್ತ್ರದ ಸಾರ್ವಕಾಲಿಕಫಲತ್ವ)
सद्यः फलति गान्धर्वं मासमेकं पुराणकम् ।
वेदाः फलन्ति कालेषु ज्योतिर्वैद्यो निरन्तरम् ॥३॥
गान्धर्वविद्या सङ्गीतगायनविद्या वाऽचिरादेव फलं यच्छति । पुराणादीनि मासैकावधौ फलप्रदानि । वेदमन्त्राः कतिपयकालेषु गच्छत्सु दीर्घावधौ वा फलप्रदायकाः । परन्तु, ज्योतिःशास्त्रं सर्वदा सर्वकालेषु च फलप्रदं भवति । तथा च, वैद्यशास्त्रमपि दिवानिशाभेदेन विना, ऋतुमासादिकालभेदेन विना सदा फलप्रदायकम् ॥
ಗಾಂಧರ್ವವಿದ್ಯೆ / ಸಂಗೀತಾದಿ ಗಾಯನವಿದ್ಯೆಯು ಬಹುಬೇಗನೆ ಫಲವನ್ನೀಯುತ್ತದೆ. ಪುರಾಣಾದಿಗಳು ಒಂದು ತಿಂಗಳ ಅವಧಿಯಲ್ಲಿ ಫಲಪ್ರದಗಳು. ವೇದಮಂತ್ರಗಳು ಕೆಲವಾರು ಕಾಲ ಕಳೆದಾಗ / ದೀರ್ಘಾವಧಿಯಲ್ಲಿ ಫಲಪ್ರದಾಯಕಗಳು / ನಿಧಾನಫಲದಾಯಕಗಳು. ಆದರೆ, ಜ್ಯೋತಿಃಶಾಸ್ತ್ರವು ಯಾವಾಗಲೂ ಹಾಗೂ ಎಲ್ಲಕಾಲಗಳಲ್ಲೂ ಫಲಪ್ರದವಾಗುವುದು. ಅಂತೆಯೇ, ವೈದ್ಯಶಾಸ್ತ್ರವೂ ಕೂಡ ಹಗಲಿರುಳುಗಳ ಭೇದವಿಲ್ಲದೆ, ಋತು-ಮಾಸಾದಿಗಳ ಭೇದವಿಲ್ಲದೆ, ಸದಾ ಫಲಪ್ರದಾಯಕವು.
वैद्यशास्त्रस्य प्रतिपदप्रत्ययावहता (ವೈದ್ಯಶಾಸ್ತ್ರದ ಪ್ರತಿಪದವೂ ಜ್ಞಾನಪರಿಪ್ಲುತ)
अन्यानि शास्त्राणि विनोदमात्रं
प्राप्तेषु वा तेषु न तैश्च किञ्चित् ।
चिकित्सित-ज्यौतिष-मन्त्रवादाः
पदे पदे प्रत्ययमावहन्ति ॥४॥
(उपजातिवृत्तम्) (कल्पतरु)
इतरशास्त्राणि विनोदकारकतामात्राणि; तेषां प्राप्तिरप्राप्तिर्वा न किञ्चिदन्तरं तनोति । परन्तु, वैद्यशास्त्रं, ज्योतिषशास्त्रं, मन्त्रशास्त्रं चैतानि त्रीणि, प्रतिशब्देऽपि विशेषज्ञानं जनयन्ति (जीवनस्य प्रतिक्षणेऽपि सहायकानि भवन्ति)॥
ಇತರಶಾಸ್ತ್ರಗಳು ಕೇವಲ ಮನೋರಂಜನೆಗಾಗಿ; ಅವುಗಳ ಪ್ರಾಪ್ತಿಯಿಂದ / ಅಪ್ರಾಪ್ತಿಯಿಂದ ಯಾವುದೇ ವ್ಯತ್ಯಾಸವಾಗಲಾರದು.ಆದರೆ, ವೈದ್ಯಶಾಸ್ತ್ರ, ಜ್ಯೋತಿಷ್ಯ ಹಾಗೂ ಮಂತ್ರಶಾಸ್ತ್ರ— ಇವು ೩, ಪದಪದಗಳಲ್ಲೂ ವಿಶೇಷಜ್ಞಾನವನ್ನು ಹುಟ್ಟಿಸುತ್ತವೆ (ಬದುಕಿನ ಹೆಜ್ಜೆ ಹೆಜ್ಜೆಯಲ್ಲೂ ಸಹಕಾರಿಗಳಾಗಿವೆ).
वैद्यकीयशास्त्रस्य एकमेवाद्वितीयता (ವೈದ್ಯಶಾಸ್ತ್ರದ ಏಕಮೇವಾದ್ವಿತೀಯತೆ)
एकं शास्त्रं वैद्यमध्यात्मकं वा
सौख्यं चैकं यत्सुखं वा तपो वा ।
वन्द्यश्चैको भूपतिर्वा यतिर्वा
ह्येकं कर्म श्रेयसं वा यशो वा ॥५॥
(हारीतसंहिता)
ಇರುವುದು ಒಂದೇ ಶಾಸ್ತ್ರ— ವೈದ್ಯಶಾಸ್ತ್ರ ಅಥವಾ ಅಧ್ಯಾತ್ಮ;
ಸುಖವೆಂದರೆ ಇದೊಂದೇ— ನಿರೋಗತೆ ಅಥವಾ ತಪಸ್ಸು;
ಪೂಜ್ಯನೋರ್ವನೇ— ಅರಸ ಅಥವಾ ಸಂನ್ಯಾಸಿ;
ಕರ್ಮವೆಂಬುದು ಒಂದೇ ಇರುವುದು— ಶ್ರೇಯಸ್ಕರ (ಪುಣ್ಯ / ಮೋಕ್ಷಪ್ರದ) ಅಥವಾ ಯಶಃಪ್ರದವಾದುದು (ಕೀರ್ತಿದಾಯಕ).
यस्मिञ्ज्ञातेसर्वमिदं, ज्ञातं भवति निश्चितम् ।
तस्मिन्परिश्रमः कार्यः, किमन्यच्छास्त्रभाषितम् ॥६॥
(शिवसंहिता)
ಯಾವುದನರಿತರೆ ಸರ್ವವನರಿತಿಹನಪ್ಪುದು ನಿಶ್ಚಯವು |
ಅಂತಹುದನು ತಾನರಿಯಲೆಬೇಕು ಅನ್ಯದಿನ್ನೇನು ಫಲ ||
यस्मिन् योगशास्त्रे अधीते, ज्ञाते सति, निश्चयेन सर्वसारमपि ज्ञातं भवति योगारूढतया समाधिस्थितौ वा परब्रह्मज्ञानम् आत्मज्ञानं वा भवति, तादृशं शास्त्रम् अध्येतव्यम् ; तेन विना अन्यत्किमपि शास्त्रं न बहुलाभप्रदम् भवति ननु?
ಯಸ್ಮಿನ್ ಜ್ಞಾತೇ— ಯಾವ ಯೋಗಶಾಸ್ತ್ರವನ್ನು ತಿಳಿದಾಗ,
ನಿಶ್ಚಿತಮ್— ಖಂಡಿತವಾಗಿಯೂ,
ಇದಂ ಸರ್ವಂ— ಇದೆಲ್ಲವೂ, ಈ ಜಗದಲ್ಲಿರುವುದೆಲ್ಲದರ ಸಾರವೂ,
ಜ್ಞಾತಂ ಭವತಿ— ತಿಳಿದಂತೆ ಆಗುತ್ತದೋ,
ತಸ್ಮಿನ್— ಅಂಥದ್ದರಲ್ಲಿ,
ಪರಿಶ್ರಮಃ ಕಾರ್ಯಃ— ಪರಿಶ್ರಮ ಪಡಬೇಕು, ಅಂಥದ್ದನ್ನು ತಿಳಿಯಲು ಪ್ರಯತ್ನಿಸಬೇಕು;
ಅನ್ಯತ್ ಶಾಸ್ತ್ರಭಾಷಿತಂ— ಬೇರೆ ಶಾಸ್ತ್ರದ ಹೇಳಿಕೆಗಳಿಂದ,
ಕಿಮ್?— ಏನು ಪ್ರಯೋಜನ?
ಯೋಗಶಾಸ್ತ್ರವು ಆಯುರ್ವೇದ ಚಿಕಿತ್ಸಾವಿಧಾನದ ಭಾಗವೇ ಆಗಿರುವುದರಿಂದ ಇಲ್ಲಿ ಈ ಸುಭಾಷಿತವನ್ನು ಪ್ರಸ್ತಾಪಿಸಲಾಗಿದೆ.
ಇಲ್ಲಿಗೆ ಶ್ರೀಭಾಸ್ಕರಶರ್ಮವಿರಚಿತ ವೈದ್ಯರಹಸ್ಯದೀಪಿಕೆಯ ವೈದ್ಯಕಶಾಸ್ತ್ರವಿಜ್ಞಾನೀಯವೆಂಬ ಒಂದನೆಯ ಅಧ್ಯಾಯವು ಮುಗಿದುದು ||
इति श्रीभास्करशर्मविरचितायां वैद्यकरहस्यदीपिकायां वैद्यकशास्त्रविज्ञानीयो नाम प्रथमोऽध्यायः समाप्तः ॥
द्वितीयोऽध्यायः (೨ನೆಯ ಅಧ್ಯಾಯವು)
अथ अतः वैद्यकसंहिताविज्ञानीयम् अध्यायं व्याख्यास्यामः ।
ಶುಭಮ್ | ಅನಂತರ (ಭಾಸ್ಕರಶರ್ಮ ವಿರಚಿತವಾದ ವೈದ್ಯಕೀಯಸುಭಾಷಿತಸಾಹಿತ್ಯದಲ್ಲಿ) ಆಯುರ್ವೇದ ವೈದ್ಯಕೀಯಸಂಹಿತಾವಿಜ್ಞಾನದ ಬಗೆಗಿನ ಅಧ್ಯಾಯವನ್ನು ವ್ಯಾಖ್ಯಾನಿಸುತ್ತೇವೆ.
इति ह स्म आहुः मनीषिणः प्राच्याः ।
ಈ ತೆರನಾಗಿ(ಇತಿ) ಹಿಂದಿನ / ಪ್ರಾಚೀನ (ಪ್ರಾಚ್ಯಾಃ) ಮನೀಷಿಗಳು (ಜ್ಞಾನಿಗಳು) ನಿಶ್ಚಯಾತ್ಮಕವಾಗಿ (ಹ) ಹೇಳಿದರು (ಆಹುಃ).
मूलायुर्वेदसंहिताकर्तारः महर्षयः (ಮೂಲ ಆಯುರ್ವೇದಸಂಹಿತಾಕಾರ ಮಹರ್ಷಿಗಳು)
अथ मैत्रीपरः पुण्यमायुर्वेदं पुनर्वसुः ।
शिष्येभ्यो दत्तवान् षड्भ्यः सर्वभूतानुकम्पया ॥१॥
अग्निवेशश्च भेलश्च जतूकर्णः पराशरः ।
हारीतः क्षारपाणिश्च जगृहुस्तन्मुनेर्वचः ॥२॥
(चरकसंहिता)
ಅಥ ಮೈತ್ರೀಪರಃ ಪುಣ್ಯಮಾಯುರ್ವೇದಂ ಪುನರ್ವಸುಃ |
ಶಿಷ್ಯೇಭ್ಯೋ ದತ್ತವಾನ್ ಷಡ್ಭ್ಯಃ ಸರ್ವಭೂತಾನುಕಂಪಯಾ || ೧ ||
ಅಗ್ನಿವೇಶಶ್ಚ ಭೇಲಶ್ಚ ಜತೂಕರ್ಣಃ ಪರಾಶರಃ |
ಹಾರೀತಃ ಕ್ಷಾರಪಾಣಿಶ್ಚ ಜಗೃಹುಸ್ತನ್ಮುನೇರ್ವಚಃ || ೨ ||
(ಚರಕಸಂಹಿತಾ)
अथ (प्रथमाध्यायाद् अनन्तरं / मङ्गलसूचकं) मैत्रीपरः (स्नेहान्वितः) पुनर्वसुः सर्वभूतानुकम्पया (सकलचराचरानाम् अनुकम्पया /दयया) पुण्यम् (पुण्यप्रदम्) आयुर्वेदं (स्वस्य) षड्भ्यः शिष्येभ्यः दत्तवान् / उपदिदेश । च (तथा), अग्निवेशः, भेलः च ;जतूकर्णः, पराशरः, हारीतः, क्षारपाणिः च तत्+मुनेः वचः (वचनानि उपदेशाः वा यथावत्) जगृहुः (परिगृहीतवन्तः) ।
ಅಥ— ಒಂದನೆಯ ಅಧ್ಯಾಯದ ಅನಂತರ / ಅಥ— ಮಂಗಲಸೂಚಕ ಪದ,
ಮೈತ್ರೀಪರಃ— ಸ್ನೇಹಾನ್ವಿತನಾದ,
ಪುನರ್ವಸುಃ— ಪುನರ್ವಸುವು,
ಸರ್ವಭೂತಾನುಕಂಪಯಾ— ಸಕಲ ಚರಾಚರಗಳ ಮೇಲಿನ ಅನುಕಂಪ / ದಯೆಯಿಂದ,
ಪುಣ್ಯಮ್— ಪುಣ್ಯಪ್ರದವಾದ,
ಆಯುರ್ವೇದಂ— ಆಯುರ್ವೇದವನ್ನು,
(ಸ್ವಸ್ಯ— ತನ್ನ),
ಷಡ್ಭ್ಯಃ ಶಿಷ್ಯೇಭ್ಯಃ ದತ್ತವಾನ್— ಆರು ಮಂದಿ ಶಿಷ್ಯರುಗಳಿಗೆ ನೀಡಿದನು / ಉಪದೇಶಿಸಿದನು.
ಚ— ಹಾಗೆಯೇ,
ಅಗ್ನಿವೇಶ ಮತ್ತು ಭೇಲ, ಜತೂಕರ್ಣ, ಪರಾಶರ, ಹಾರೀತ ಹಾಗೂ ಕ್ಷಾರಪಾಣಿಯು,
ತತ್+ಮುನೇಃ— ಆ ಮುನಿಯ,
ವಚಃ— ವಚನಗಳನ್ನು / ಉಪದೇಶಗಳನ್ನು ಯಥಾವತ್ತಾಗಿ / ಹೇಳಿದಂತೆಯೇ,
ಜಗೃಹುಃ— ಪರಿಗ್ರಹಿಸಿದರು / ಪಡೆದರು / ಸ್ವೀಕರಿಸಿದರು.
(ಚರಕಸಂಹಿತೆ)
अग्निवेशसंहिता (ಅಗ್ನಿವೇಶಸಂಹಿತೆ)
बुद्धेर्विशेषस्तस्यासीन्नोपदेशान्तरं मुनेः ।
तन्त्रस्य कर्ता प्रथममग्निवेशो यतोऽभवत् ॥ ३ ॥
(चरकसंहिता)
ಬುದ್ಧೇರ್ವಿಶೇಷಸ್ತಸ್ಯಾಸೀನ್ನೋಪದೇಶಾನ್ತರಂ ಮುನೇಃ |
ತನ್ತ್ರಸ್ಯ ಕರ್ತಾ ಪ್ರಥಮಮಗ್ನಿವೇಶೋ ಯತೋऽಭವತ್ || ೩ ||
(ಚರಕಸಂಹಿತಾ)
तस्य मुनेः (अग्निवेशमहर्षेः), बुद्धेः विशेषः आसीत् (विशेषमेधाशक्तिः आसीत्) । (अतः तस्मै), उपदेशान्तरं न (अन्योपदेशस्य आवश्यकता न आसीत्, न केनापि कृतं च) । यतः (अत एव), अग्निवेशः प्रथमं (आदावेव, आदिमस्य वा), तन्त्रस्य कर्ता (आयुर्वेदशास्त्रस्य, अग्निवेशसंहितायाः वा रचयिता, अधिवक्ता, उपदेष्टा वा), अभवत् (बभूव, आसीत्) ॥
अग्निवेशसंहितायाः मूलग्रन्थः लुप्तः । किन्तु, चरकप्रतिसंस्कृता संहिता चरकसंहिता इति नाम्ना उपलब्धा सुप्रसिद्धा च । पुनर्वसुमहर्षेः, अन्यशिष्यैः अग्निवेशानन्तरं आयुर्वेदसंहिताः विरचिताः । एतासु, भेलसंहिता अपूर्णतया लब्धा; हारीतसंहिता अपि उपलब्धा, परन्तु तस्याः मूलकृतेः सम्बन्धे तु संदिग्धता अस्ति । जतूकर्ण-पराशर-क्षारपाण्यादीनां संहिताः नोपलब्धाः, किन्तु तेषां कानिचन वचनानि अन्यग्रन्थेषु दृश्यन्ते ॥
ತಸ್ಯ ಮುನೇಃ (ಅಗ್ನಿವೇಶ ಮಹರ್ಷಿಗಳಿಗೆ), ಬುದ್ಧೇಃ ವಿಶೇಷಃ ಆಸೀತ್ (ವಿಶೇಷವಾದ ಮೇಧಾಶಕ್ತಿಯಿತ್ತು.) | (ಆದ್ದರಿಂದ ಅವರಿಗೆ), ಉಪದೇಶಾನ್ತರಂ ನ (ಅನ್ಯರ ಉಪದೇಶದ ಆವಶ್ಯಕತೆಯಿರಲಿಲ್ಲ; ಹಾಗಾಗಿ ಯಾರಿಂದಲೂ ಉಪದೇಶವು ಮಾಡಲ್ಪಡಲಿಲ್ಲ ಕೂಡ.) | ಯತಃ (ಆದ್ದರಿಂದಲೇ), ಅಗ್ನಿವೇಶಃ ಪ್ರಥಮಂ (ಅಗ್ನಿವೇಶರು ಪ್ರಪ್ರಥಮವಾಗಿ / ಮೊತ್ತಮೊದಲನೆಯದಾದ), ತನ್ತ್ರಸ್ಯ ಕರ್ತಾ (ಆಯುರ್ವೇದ ಶಾಸ್ತ್ರದ / ಅಗ್ನಿವೇಶಸಂಹಿತೆಯ ಕರ್ತೃ, ರಚನೆ ಮಾಡಿದವರು, ಅಧಿಕೃತವಾಗಿ ಹೇಳಿದವರು, ಉಪದೇಶಿಸಿದವರು), ಅಭವತ್ (ಆಗಿದ್ದರು, ಆದರು.) ||
ಅಗ್ನಿವೇಶಸಂಹಿತೆಯ ಮೂಲಗ್ರಂಥವು ಲೋಪವಾಗಿ / ಲುಪ್ತವಾಗಿ / ಕಾಣೆಯಾಗಿ ಹೋಗಿದೆ. ಆದರೆ, ಚರಕಮಹರ್ಷಿಗಳಿಂದ ಪುನಃ ಸಂಸ್ಕರಿಸಲ್ಪಟ್ಟು, ಚರಕಪ್ರತಿಸಂಸ್ಕೃತವಾಗಿ, ಚರಕಸಂಹಿತೆಯೆಂಬ ಹೆಸರಿನಿಂದ ದೊರೆತಿದ್ದು, ಸುಪ್ರಸಿದ್ಧವಾಗಿದೆ. ಬಹುಪ್ರಾಚೀನರಾದ ಪುನರ್ವಸು ಮಹರ್ಷಿಗಳ ಅಗ್ನಿವೇಶರ ಹೊರತಾದ ಇತರ ಶಿಷ್ಯರಿಂದ, ಅಗ್ನಿವೇಶರ ಬಳಿಕ ಆಯುರ್ವೇದಸಂಹಿತೆಗಳು ವಿಶೇಷವಾಗಿ ರಚಿಸಲ್ಪಟ್ಟವು. ಇವುಗಳಲ್ಲಿ ಭೇಲಸಂಹಿತೆಯು ಅಸಮಗ್ರವಾಗಿ (ಅಪರಿಪೂರ್ಣವಾಗಿ) ಲಬ್ಧವಾಗಿದೆ; ಹಾರೀತಸಂಹಿತೆ ಎನ್ನಲ್ಪಟ್ಟಿರುವುದೂ ದೊರಕಿದೆಯಾದರೂ ಅದಕ್ಕೂ ಮೂಲ ಅಗ್ನಿವೇಶ / ಹಾರೀತಸಂಹಿತೆಗೂ ಇರುವ ಸಂಬಂಧವು ಅನೇಕ ವಿಚಾರಗಳಲ್ಲಿ ಸಂದೇಹಾಸ್ಪದವಾಗಿದೆ. ಜತೂಕರ್ಣ, ಪರಾಶರ, ಕ್ಷಾರಪಾಣಿ ಮುಂತಾದವರ ಸಂಹಿತೆಗಳು ದೊರೆತಿಲ್ಲ; ಆದರೆ ಅವರು ಹೇಳಿದವೆಂಬ ಕೆಲವು ಮಾತುಗಳು ಇತರಗ್ರಂಥಗಳಲ್ಲಿ ಉಲ್ಲೇಖಿಸಲ್ಪಟ್ಟಿವೆ.
_*प्रमुखाः, आयुर्वेदसंहिताः*_
_*(ಪ್ರಮುಖ ಆಯುರ್ವೇದಸಂಹಿತೆಗಳು)*_
*चरकः सुश्रुतश्चैव वाग्भटश्च तथाऽपरः ।*
*मुख्याश्च संहिता वाच्यास्तिस्र एव युगे युगे ॥ ४ ॥*
(हारीतसंहिता)
*ಚರಕಃ ಸುಶ್ರುತಶ್ಚೈವ ವಾಗ್ಭಟಶ್ಚ ತಥಾऽಪರಃ |*
*ಮುಖ್ಯಾಶ್ಚ ಸಂಹಿತಾ ವಾಚ್ಯಾಸ್ತಿಸ್ರ ಏವ ಯುಗೇ ಯುಗೇ || ೪ ||*
(ಹಾರೀತಸಂಹಿತಾ)
_चरकः (चरकसंहिता), सुश्रुतः (सुश्रुतसंहिता), तथा च अपरः वाग्भटः (वाग्भटसंहिता / अष्टाङ्गहृदयम् अष्टाङ्गसङ्ग्रहः च) च एव तिस्रः (संहितात्रयमेव) युगे युगे (कृतादिप्रतियुगम् / चतुर्ष्वपि युगेषु) च एव मुख्याः संहिताः (प्रधानाः आयुर्वेदवैद्यकीयसंहिताः इति) वाच्याः (प्रोक्ताः वक्तव्याः, वा) ॥_
_ಚರಕಸಂಹಿತೆ, ಸುಶ್ರುತಸಂಹಿತೆ ಹಾಗೂ ವಾಗ್ಭಟಸಂಹಿತೆಗಳು (ಅಷ್ಟಾಂಗಹೃದಯಮ್ ಹಾಗೂ ಅಷ್ಟಾಂಗಸಂಗ್ರಹಃ)— ಈ ಮೂರು ಮಾತ್ರ ಕೃತಾದಿ ನಾಲ್ಕುಯುಗಗಳಲ್ಲೂ ಪ್ರಮುಖವಾದ ಆಯುರ್ವೇದವೈದ್ಯಕೀಯ ಸಂಹಿತೆಗಳೆಂದು ಪರಿಗಣಿಸಲ್ಪಡಬೇಕು / ಹೇಳಲ್ಪಡಬೇಕು._
_*चरकप्रतिसंस्कृतस्य अग्निवेशतन्त्रस्य चरकसंहितायाः वा महत्त्वम्*_
*_ಚರಕಪ್ರತಿಸಂಸ್ಕೃತವಾದ ಅಗ್ನಿವೇಶತನ್ತ್ರದ ಅಥವಾ ಚರಕಸಂಹಿತೆಯ ಮಹತ್ತ್ವವು_*
*अग्निवेशकृते तन्त्रे चरकप्रतिसंस्कृते ।*
*यदिहास्ति तदन्यत्र यन्नेहास्ति न तत् क्वचित् ॥ ५ ॥*
(दृढबल)
*ಅಗ್ನಿವೇಶಕೃತೇ ತನ್ತ್ರೇ ಚರಕಪ್ರತಿಸಂಸ್ಕೃತೇ |*
*ಯದಿಹಾಸ್ತಿ ತದನ್ಯತ್ರ ಯನ್ನೇಹಾಸ್ತಿ ನ ತತ್ ಕ್ವಚಿತ್ || ೫ ||*
(ದೃಢಬಲ)
_चरकप्रतिसंस्कृते (चरकाचार्येण परिष्कृते) अग्निवेशकृते (अग्निवेशाचार्येण विरचिते) तन्त्रे (चरकसंहिता इति प्रसिद्धे आयुर्वेदशास्त्रे), इह (अत्र, अस्मिन् ग्रन्थे) यत् अस्ति (ये विषयाः सन्ति) तत् अन्यत्र (ते विषयाः अन्येष्वपि ग्रन्थेषु, अन्यासु आयुर्वेदसंहितासु वा अपि वर्तन्ते) । (किन्तु) इह (चरकसंहितायां) यत् (ये विचाराः) न अस्ति (न वर्तन्ते), तत् (ते विचाराः) क्वचित् (अन्यत्र कुत्रापि) न (न सन्ति) ॥ (इयं चरकसंहिता कायचिकित्साविषये आयुर्वेदशास्त्रेषु विश्वकोशत्वेन विराजते इत्यर्थः ॥)_
_आदौ *महाभारते व्यासेनोक्तम् — “धर्मे चार्थे च कामे च मोक्षे च भरतर्षभ । यदिहास्ति तदन्यत्र यन्नेहास्ति न तत्क्वचित् ॥”* इति । तदनन्तरं *वाल्मीकिना योगवासिष्ठे प्रोक्तम्— “यदिहास्ति तदन्यत्र यन्नेहास्ति न तत्क्वचित् । इमं समस्तविज्ञानशास्त्रकोषं विदुर्बुधाः ॥”* इति । यथा अस्मिन् श्लोके चरकसंहितायाः कायचिकित्साविषयविस्तारस्य महत्त्वं वर्णितं तथैव पश्चात् कालान्तरे, *आयुर्वेदरहस्यदीपिकायां सुश्रुतसंहितायाः शल्याङ्गस्य महत्त्वम्* अपि इत्थं वर्णितम्— *“कायबालग्रहोर्ध्वे च जरादंष्ट्राविषे तथा । तदिहास्ति यदन्यत्र शल्यं चास्य तु न क्वचित् ॥”* इति ॥_
_ಚರಕಾಚಾರ್ಯರಿಂದ ಪರಿಷ್ಕೃತವಾಗಿ ಚರಕಸಂಹಿತೆಯೆಂದು ಪ್ರಸಿದ್ಧವಾಗಿರುವ ಅಗ್ನಿವೇಶಮುನಿದೃಷ್ಟವಾದ ಅಗ್ನಿವೇಶತಂತ್ರದಲ್ಲಿ ಏನೇನಿದೆಯೋ ಅದೆಲ್ಲವೂ ಬೇರೆಡೆಯೂ ಕಂಡುಬರುತ್ತದೆ. ಆದರೆ, ಇದರಲ್ಲಿ ಏನಿಲ್ಲವೋ, ಅಂಥದ್ದು ಬೇರೆಡೆ ಎಲ್ಲಿಯೂ ಇಲ್ಲ. (ಹೀಗೆ, ಚರಕಸಂಹಿತೆಯು ಕಾಯಚಿಕಿತ್ಸಾ / General Medicine ವಿಚಾರದಲ್ಲಿ ಸಮಸ್ತ ಆಯುರ್ವೇದಶಾಸ್ತ್ರಗಳಲ್ಲೇ ವಿಶ್ವಕೋಶದಂತೆ ವಿರಾಜಿಸುತ್ತಿದೆ ಎಂದರ್ಥ.)_
_ಮೊತ್ತಮೊದಲಿಗೆ *ಮಹಾಭಾರತದಲ್ಲಿ ವ್ಯಾಸರಿಂದ ಹೇಳಲ್ಪಟ್ಟಿತು— “ಧರ್ಮೇ ಚಾರ್ಥೇ ಚ ಕಾಮೇ ಚ ಮೋಕ್ಷೇ ಚ ಭರತರ್ಷಭ | ಯದಿಹಾಸ್ತಿ ತದನ್ಯತ್ರ ಯನ್ನೇಹಾಸ್ತಿ ನ ತತ್ಕ್ವಚಿತ್ ||”* (“ಧರ್ಮಾರ್ಥಕಾಮಮೋಕ್ಷಗಳೆಂಬ ಚತುರ್ವಿಧಪುರುಷಾರ್ಥಸಾಧನೆಗೆ ಪೂರಕವಾಗಿರುವ ಯಾವ ವಿಚಾರಗಳು ಇದರಲ್ಲಿ / ಮಹಾಭಾರತದಲ್ಲಿ ಇವೆಯೋ ಅವು ಬೇರೆಡೆಯೂ ಕಂಡುಬರಬಹುದಾದರೂ, ಇದರಲ್ಲಿಲ್ಲದಿರುವುದು ಮಾತ್ರ ಬೇರೆಲ್ಲೂ ಸಿಗದು”) ಎಂಬುದಾಗಿ. ಇದರ ಬಳಿಕ *ವಾಲ್ಮೀಕಿಗಳಿಂದ ಯೋಗವಾಸಿಷ್ಠದಲ್ಲಿ ಪ್ರೋಕ್ತವಾದುದು— “ಯದಿಹಾಸ್ತಿ ತದನ್ಯತ್ರ ಯನ್ನೇಹಾಸ್ತಿ ನ ತತ್ಕ್ವಚಿತ್ | ಇಮಂ ಸಮಸ್ತವಿಜ್ಞಾನಶಾಸ್ತ್ರಕೋಷಂ ವಿದುರ್ಬುಧಾಃ ||”* (“ಇಲ್ಲಿ / ಯೋಗವಾಸಿಷ್ಠದಲ್ಲಿ ಇರುವುದು ಬೇರೆಡೆ ಇರಬಹುದು; ಆದರೆ, ಇಲ್ಲಿಲ್ಲದಿರುವುದು ಬೇರಿಲ್ಲ. ಇದನ್ನು ಸಮಸ್ತ ವಿಜ್ಞಾನ ಹಾಗೂ ಶಾಸ್ತ್ರಗಳ ಕೋಶವೆಂದು ವಿಬುಧರು / ಜ್ಞಾನಿಗಳು ತಿಳಿಯುವರು”) ಎಂದು. ಹೇಗೆ ಈ ಶ್ಲೋಕದಲ್ಲಿ ಚರಕಸಂಹಿತೆಯ ಕಾಯಚಿಕಿತ್ಸಾವಿಷಯವಿಸ್ತಾರದ ಮಹತ್ತ್ವವು ವರ್ಣಿತವಾಗಿದೆಯೋ, ಅಂತೆಯೇ ಇದರ ತರುವಾಯದ ಕಾಲಘಟ್ಟದಲ್ಲಿ, *ಆಯುರ್ವೇದರಹಸ್ಯದೀಪಿಕೆಯಲ್ಲಿ ಸುಶ್ರುತಸಂಹಿತೆಯ ಶಲ್ಯಾಂಗ / ಶಸ್ತ್ರಚಿಕಿತ್ಸೆಯ ವಿಚಾರದ ಮಹತ್ತ್ವವೂ* ಈ ರೀತಿಯಾಗಿ ವರ್ಣಿಸಲ್ಪಟ್ಟಿತು— *“ಕಾಯಬಾಲಗ್ರಹೋರ್ಧ್ವೇ ಚ ಜರಾದಂಷ್ಟಾವಿಷೇ ತಥಾ | ತದಿಹಾಸ್ತಿ ಯದನ್ಯತ್ರ ಶಲ್ಯಂ ಚಾಸ್ಯ ತು ನ ಕ್ವಚಿತ್ ||”* (“ಕಾಯಚಿಕಿತ್ಸೆ / ದೊಡ್ಡವರ ರೋಗಚಿಕಿತ್ಸೆ / General Medicine, ಬಾಲಗ್ರಹ / ಕೌಮಾರಭೃತ್ಯ / ಮಕ್ಕಳರೋಗಚಿಕಿತ್ಸೆ / Paediatrics ಮತ್ತು, ಊರ್ಧ್ವರೋಗ / ಶಿರೋರೋಗ / ಕಿವಿ,ಮೂಗು,ಗಂಟಲು ಹಾಗೂ ಶಿರ,ಕುತ್ತಿಗೆಯ ರೋಗ ಚಿಕಿತ್ಸೆ / ENT & Head and Neck diseases, ಹಾಗೆಯೇ ಜರಾರೋಗ / ವೃದ್ಧಾಪ್ಯ ಆರೈಕೆ / Geriatrics ಮತ್ತು ಹಾವು ಮುಂತಾದ ವಿಷಜಂತುಕಡಿತ ಹಾಗೂ ವಿಷಪ್ರಾಶನಾದಿಚಿಕಿತ್ಸೆ (Poisoning & snake bite management)— ಇವೆಲ್ಲವುಗಳು ಬೇರೆಡೆಯಲ್ಲಿರುವಂತೆಯೇ ಸುಶ್ರುತಸಂಹಿತೆಯಲ್ಲೂ ಇವೆ. ಆದರೆ, ಇದರಲ್ಲಿರುವ ಶಲ್ಯತಂತ್ರವಾದರೋ ಬೇರೆಡೆ ಕಂಡುಬರುವುದಿಲ್ಲ”) ಎಂಬುದಾಗಿ._
*_संहिताश्रेष्ठस्थानानि_*
*_ಸಂಹಿತೆಗಳ ಶ್ರೇಷ್ಠಸ್ಥಾನಗಳು_*
*निदाने माधवश्श्रेष्ठस्सूत्रस्थाने तु वाग्भटः ।*
शारीरे सुश्रुतश्श्रेष्ठश्चरकस्तु चिकित्सिते ॥ ६ ॥*
_Maadhava-nidaanam book is the best among all ayurveda texts in the process of diagnosis or 'nidaanam'. Vaagbhata-samhitaa is the best in describing various diseases or in 'sootra-sthaanam'. Sushruta-samhitaa is the best in describing the body parts or 'shaareera-sthaanam'. Charaka-samhitaa is the best for treatment aspects / 'chikitsaa-sthaanam'._
_ರೋಗ ಪತ್ತೆಹಚ್ಚುವಿಕೆಯಲ್ಲಿ ಮಾಧವನಿದಾನವೂ, ವಿವಿಧ ರೋಗಗಳನ್ನು ವಿವರಿಸುವುದರಲ್ಲಿ ವಾಗ್ಭಟಸಂಹಿತೆಯೂ, ಶರೀರದ ವಿವಿಧ ಭಾಗಗಳ ವಿವರಣೆಯಲ್ಲಿ ಸುಶ್ರುತಸಂಹಿತೆಯೂ, ರೋಗಚಿಕಿತ್ಸೆಯಲ್ಲಿ ಚರಕಸಂಹಿತೆಯೂ ಅತ್ಯುತ್ತಮ ಪರಾಮರ್ಶನ ಗ್ರಂಥಗಳಾಗಿವೆ ಆಯುರ್ವೇದ ವೈದ್ಯಕೀಯಶಾಸ್ತ್ರದಲ್ಲಿ._
अष्टाङ्गसङ्ग्रहमहत्त्वम्
ಅಷ್ಟಾಂಗಸಂಗ್ರಹದ ಮಹತ್ತ್ವ
अष्टाङ्गसङ्ग्रहे ज्ञाते वृथा प्राक्तन्त्रयोः श्रमः ।
अष्टाङ्गसङ्ग्रहेऽज्ञाते वृथा प्राक्तन्त्रयोः श्रमः ॥ ७ ॥
ಅಷ್ಟಾಂಗಸಂಗ್ರಹೇ ಜ್ಞಾತೇ ವೃಥಾ ಪ್ರಾಕ್ತಂತ್ರಯೋಃ ಶ್ರಮಃ |
ಅಷ್ಟಾಂಗಸಂಗ್ರಹೇऽಜ್ಞಾತೇ ವೃಥಾ ಪ್ರಾಕ್ತಂತ್ರಯೋಃ ಶ್ರಮಃ || ೭ ||
“अष्टाङ्गसङ्ग्रहः”, वाग्भटाचार्यकृतः, स तु पूर्वाचार्योक्तानां एकैकस्थानयुक्तानां चरकसुश्रुतादिकृतानां कायचिकित्सा-शल्यतन्त्रादिविद्यानां सर्वासां सारसंग्रहो वर्तते । अतः तदध्ययनात्, पूर्वग्रन्थानामध्ययनपरिश्रमः अनावश्यको भवति । यतोऽसौ “अस्थान-विस्तराक्षेप-पुनरुक्तादिवर्जितः” अस्ति । तथैव, यः कोऽपि नाधीत एतं, तस्य पूर्वसंहिताध्ययनश्रमः व्यर्थः कालनाशकश्च भवति ।
तथा च, “हृदयमिव हृदयमेतत् सर्वायुर्वेदवाङ्मयपयोधेः” एतादृशी अपरापि वाग्भटविरचिता संहिता विराजते, अष्टाङ्गसङ्ग्रहतोऽपि सङ्क्षिप्ता । अतः, अष्टाङ्गसङ्ग्रहोऽष्टाङ्गायुर्वेदस्य पाठ्यं (Treatise / Text Book), अष्टाङ्गहृदयं च तस्य सारः (Manual / Hand Book) इति सुविख्यातः ।
ವಾಗ್ಭಟಾಚಾರ್ಯವಿರಚಿತವಾದ ಅಷ್ಟಾಂಗಸಂಗ್ರಹವಾದರೋ ಹಿಂದಿನ ಆಚಾರ್ಯರುಗಳಾದ ಚರಕ-ಸುಶ್ರುತಾದಿವಿರಚಿತಗಳಾದ, ಒಂದೊಂದು ಸ್ಥಾನದಿಂದ ಕೂಡಿದ ಕಾಯಚಿಕಿತ್ಸಾ-ಶಲ್ಯತಂತ್ರಾದಿಗಳೆಲ್ಲದರ ಸಾರಸಂಗ್ರಹವಾಗಿರುವುದು. ಆದ್ದರಿಂದ ಅದರ ಅಧ್ಯಯನದಿಂದ, ಹಿಂದಿನ ಗ್ರಂಥಗಳ ಅಧ್ಯಯನವು ಅವಶ್ಯಕವಾಗುವುದಿಲ್ಲ. ಯಾಕೆಂದರೆ ಇದು ಅವಶ್ಯವಿಲ್ಲದ ಕಡೆ ವಿಸ್ತರಿಸದೆ, ಆಕ್ಷೇಪಿಸದೆ, ಪುನರುಕ್ತಿಯಿಲ್ಲದೆ ಇರುವ ಕೃತಿಯಾಗಿದೆ. ಅಂತೆಯೇ, ಇದನ್ನು ಯಾವನು ಓದಿಲ್ಲವೋ ಅವನಿಗೆ ಹಿಂದಿನೆಲ್ಲ ಆಯುರ್ವೇದಸಂಹಿತೆಗಳ ಅಧ್ಯಯನದ ಶ್ರಮವು ವ್ಯರ್ಥವೂ, ಕೇವಲ ಕಾಲಹರಣವೂ ಆಗುವುದು.
ಹಾಗೆಯೇ, “ದೇಹದಲ್ಲಿ ಹೃದಯವಿರುವಂತೆ ಸಮಗ್ರ ಆಯುರ್ವೇದಸಾಹಿತ್ಯಸಾಗರದ ಹೃದಯ” ಎಂಬಂತೆ ವಾಗ್ಭಟರ ಮತ್ತೊಂದು ಕೃತಿ “ಅಷ್ಟಾಂಗಹೃದಯ”ವು ವಿರಾಜಮಾನವಾಗಿದೆ. ಇದು ಅಷ್ಟಾಂಗಸಂಗ್ರಹಕ್ಕಿಂತಲೂ ಸಂಕ್ಷಿಪ್ತವಾಗಿದೆ. ಆದ್ದರಿಂದ, ಅಷ್ಟಾಂಗಸಂಗ್ರಹವು ಅಷ್ಟಾಂಗವುಳ್ಳ ಆಯುರ್ವೇದಕ್ಕೆ ಪಾಠ್ಯಪುಸ್ತಕವೆಂದೂ, ಅಷ್ಟಾಂಗಹೃದಯವು ಅದರ ಸಾರವಾಗಿ ಮ್ಯಾನುವಲ್ / ಹ್ಯಾಂಡ್ ಬುಕ್ ಎಂದೂ ಸುವಿಖ್ಯಾತವಾಗಿದೆ.
भवतः लेखः बहु उपयुक्तः ज्ञानप्रदश्च भवति। महान् धन्यवादः॥
ReplyDelete