ಮಹಾಸುಭಾಷಿತಸಂಗ್ರಹ ೧
ಮಹಾಸುಭಾಷಿತಸಂಗ್ರಹ ೧ (ಅಕಾರಾದಿ ಅನುಕ್ರಮದಲ್ಲಿ) ಅ ಅಂಶವಸ್ತವ ನಿಶಾಕರ ನೂನಂ ಕಲ್ಪಿತಾಸ್ತರುಣಕೇತಕಖಣ್ಡೈಃ | ಯೇನ ಪಾಣ್ಡುರತರದ್ಯುತಯೋ ನಃ ಕಣ್ಟಕೈರಿವ ತುದನ್ತಿ ಶರೀರಮ್ || ೧ || (ಶ್ರೀಕಂಠಚರಿತಮ್, ವಲ್ಲಭದೇವನ ಸುಭಾಷಿತಾವಲೀ) (ರಥೋದ್ಧತಾವೃತ್ತಮ್) ಎಲೈ ನಿಶಾಕರನೆ! ಚಂದಿರನೆ!! ರಾತ್ರಿಯುಂಟುಮಾಡುವವನೆ (ನಿಶಾ-ಕರ— ನಿಶಾಂ ಕರೋತಿ ಇತಿ)!!! ನಿನ್ನ ಕಿರಣಗಳು (ಅಂಶುಗಳು) ನಿಜವಾಗಿಯೂ ಕೇದಗೆಯ ದೃಢವಾದ (ತರುಣ) ಎಲೆಗಳಂತೆ ಭಾಸವಾಗುತ್ತಿವೆ. ಯಾಕೆಂದರೆ, ಯಾವ ಈ ಬೆಳದಿಂಗಳ (ಪಾಂಡುರತರ— ಬೆಳ್ಳಗಿನಂತಹ)ಕಿರಣಗಳು ನಮ್ಮ ಶರೀರವನ್ನು ಮುಳ್ಳು / ಕಂಟಕ ಗಳಿಂದ ಚುಚ್ಚಿದಂತಹ ಅನುಭವವಾಗುತ್ತಿದೆ, ಅಸಹನೀಯ (ವಿರಹ?)ವೇದನೆಯನ್ನುಂಟುಮಾಡುತ್ತಿವೆ. ಅಂಶುಕಂ ಹೃತವತಾ ತನುಬಾಹು- ಸ್ವಸ್ತಿಕಾ-ಪಿಹಿತ-ಮುಗ್ಧಕುಚಾಗ್ರಾ | ಭಿನ್ನಶಙ್ಖವಲಯಂ ಪರಿಣೇತ್ರಾ ಪರ್ಯರಮ್ಭಿ ರಭಸಾದಚಿರೋಢಾ || ೨ || (ಮಾಘನ ಶಿಶುಪಾಲವಧಮ್ ೧೦|೪೩, ಸುಭಾಷಿತರತ್ನಭಾಂಡಾಗಾರಮ್ ೩೧೬|೩, ಸುಭಾಷಿತಸುಧಾರತ್ನಭಾಂಡಾಗಾರಮ್ ೧೭೩|೮) (ಅಂಶುಕಂ) ನವವಧುವಿನ ಸೀರೆಯ ಸೆರಗು / ಉತ್ತರೀಯ / ಮೇಲುಹೊದಿಕೆಯು, ಯಾವಾಗ, (ಪರಿಣೇತ್ರಾ)ಆಕೆಯನ್ನು ಪರಿಣಯವಾದ / ವಿವಾಹವಾದ ಪತಿಯಿಂದ, (ಹೃತವತಾ)ಸೆಳೆಯಲ್ಪಟ್ಟಿತೋ ಆಗ ಆಕೆಯು, (ಮುಗ್ಧಕುಚಾಗ್ರಾ) ತನ್ನ ನಗ್ನವಾದ ಆಕರ್ಷಕ ಕುಚಾಗ್ರ (ಮೊಲೆತೊಟ್ಟು) ಗಳನ್ನು, (ತನುಬಾಹುಸ್ವಸ್ತಿಕಾಪಿಹಿತ)ತನ್ನ ನಳಿನಕೋಮಲ ತೋಳ...