300 SubhASHitas with English and Kannada meaning
300 SubhASHitas with English and Kannada meaning
अग्निः शेषं ऋणः शेषं शत्रुः शेषं तथैव च ।
पुनः पुनः प्रवर्धेत तस्मात् शेषं न कारयेत् ॥ १ ॥
Agni (fire), ruNa (loan), shatru (enemy)— if remain even in small traces (shEsham), will grow again (punah punah pravardhEta). So, finish them completely (tatah / tasmAt shESHam na kArayEt).
ಬೆಂಕಿ (ಅಗ್ನಿ), ಸಾಲ (ಋಣ) ಹಾಗೂ (ತಥಾ ಏವ ಚ) ಶತ್ರು- ಕಿಂಚಿದಂಶಮಾತ್ರವೂ ಉಳಿದಿದ್ದರೂ (ಶೇಷಂ) ಮತ್ತೆ ಮತ್ತೆ ಬೆಳೆಯುವುವು (ಪುನಃ ಪುನಃ ಪ್ರವರ್ಧೇತ). ಹಾಗಾದ್ದರಿಂದ (ತತಃ / ತಸ್ಮಾತ್), ಅವುಗಳನ್ನು ಸಂಪೂರ್ಣವಾಗಿ ಮೂಲಸಹಿತ ನಾಶಪಡಿಸಬೇಕು; ಸ್ವಲ್ಪಾಂಶವನ್ನೂ ಉಳಿಸಬಾರದು (ಶೇಷಂ ನ ಕಾರಯೇತ್).
पृथिव्यां त्रीणि रत्नानि जलमन्नं सुभाषितम् ।
मूढैः पाषाणखण्डेषु रत्नसंज्ञाभिधीयते ॥ २ ॥
There are three jewels in this earth. They are water, food and su-bhashita (Nice-quotes)!!! But, the fools call the pieces of rocks as jewels. Subhashitas are nothing but the collection of wast experiences of people or in other words are wise sayings!
ಭೂಮಿಯಲ್ಲಿ ೩ ಬಗೆಯ ರತ್ನಗಳಿವೆ—ನೀರು, ಅನ್ನ ಮತ್ತು ಸುಭಾಷಿತ ಎಂಬುದಾಗಿ. ಆದರೆ ಮೂರ್ಖರು ಕೇವಲ ಕಲ್ಲಿನ ತುಂಡುಗಳನ್ನು ರತ್ನವೆಂದು ತಿಳಿಯುತ್ತಾರೆ. ಆದರೆ ಬುದ್ಧಿವಂತರ ಅಥವಾ ಅನುಭವಿಗಳ ನುಡಿಮುತ್ತುಗಳಾದ ಈ ಸುಭಾಷಿತಗಳು ನಿಜಾರ್ಥದಲ್ಲಿ ಬದುಕಿಗೆ ಶೋಭೆತರುವ ರತ್ನಪ್ರಾಯವಾಗಿವೆ.
Great meaning 🙏
ReplyDelete