ಚತುರ್ವೇದಗಳಲ್ಲಿ ಅಗ್ನಿದೇವತೆ

 ಚತುರ್ವೇದಗಳಲ್ಲಿ ಅಗ್ನಿದೇವತೆ

ಅಗ್ನಿರ್ವೈ ದೇವಾನಾಂ ವ್ರತಪತಿಃ |

(ಶತಪಥಬ್ರಾಹ್ಮಣ ೧.೧.೧—೨)


"ಹೇ ವ್ರತದ ಪಾಲಕನಾದ ಅಗ್ನಿದೇವನೆ! ಸುಳ್ಳು ಹೇಳುವುದನ್ನು ಬಿಡುವಿಕೆಯೇ ಮುಂತಾದ ರೂಪದ 'ವ್ರತ 'ವನ್ನು ಆಚರಿಸುತ್ತೇನೆ. ಅದನ್ನು ಪೂರೈಸಲು ನಾನು ಶಕ್ತನಾಗುವಂತೆ ಮಾಡು. ನನ್ನದಾದ ಆ ಸತ್ಯವ್ರತವು ಸಮೃದ್ಧವಾಗಲಿ " ಎಂದು ಪ್ರಾರ್ಥಿಸುತ್ತಾ ವೇದರ್ಷಿಯು ಅಗ್ನಿಯೇ ದೇವತೆಗಳೆಲ್ಲರೊಳಗೆ ವ್ರತದ ಅಧಿಪತಿಯಾಗಿರುವನು ಎಂದು ಸ್ತುತಿಸಿರುವನು. ಅಗ್ನಿಯೆಂದರೆ ದೈವೀಸಂಕಲ್ಪದ ಅಧಿದೇವತೆ. ಆತನು ಮಾನವದೇಹದಲ್ಲಿನ ನರಕೋಶಗಳಲ್ಲಿನ  ಕ್ರಿಯಾಶೀಲ ವಿಭವ (Action potential) ದ ರೂಪದಲ್ಲಿ (ವಿದ್ಯುತ್ಕಾಂತೀಯ ತರಂಗದೋಪಾಧಿಯಲ್ಲಿ) ನೆಲೆಸಿದ್ದು ನರಮಂಡಲದಲ್ಲಿ ಮೂಡುವ ದೈವೀಸಂಕಲ್ಪ ಸದೃಶವಾದ ಸತ್ಸಂಕಲ್ಪಗಳ, ಸಚ್ಚಿಂತನೆಗಳ ಹುಟ್ಟಿಗೆ ಕಾರಣನಾಗಿರುವನು. ಹಾಗಾಗಿ, ಆತನನ್ನು ದಿನವೂ ಹೆಚ್ಚು ಹೆಚ್ಚು ಆರಾಧಿಸಿದರೆ ನಮ್ಮ ಚಿಂತನೆಗಳು ಪರಿಶುದ್ಧವೂ ದೈವೀಮಯವೂ ಆಗುವುವು. ಹೀಗೆ ಆತನು ಸದ್ವ್ರತಪತಿಯೆನಿಸುವನು.


ಅಂತೆಯೇ ದೇವತಾವ್ರತಾದಿಗಳನ್ನು ಪೂರೈಸಲು ಹೋಮಿಸುವ ಹವಿರ್ದ್ರವ್ಯಗಳನ್ನು ಅವರಿಗೆ ಮುಟ್ಟಿಸುವ ಹವ್ಯವಾಹನನೂ, ದೇವತೆಗಳ ಮುಖರೂಪಿಯೂ ಆಗಿರುವುದರಿಂದಲೂ ಅಗ್ನಿಯು ದೇವತೆಗಳ ವ್ರತಪತಿಯು.


ಅಗ್ನಿರ್ವೈ ದೇವಾನಾಂ ನೇದಿಷ್ಠಮ್ |

(ಶತಪಥಬ್ರಾಹ್ಮಣ ೧.೫.೧—೧೧)


ಅಗ್ನಿಯಾದರೋ ದೇವತೆಗಳಲ್ಲೆಲ್ಲ ನಮಗೆ ಅತ್ಯಂತ ಸನಿಹದವನು, ಬಲುನಿಪುಣನು. 


ಅಗ್ನಿರ್ವೈ ದೇವಾನಾಮದ್ಧಾತಮಮ್ |

(ಶತಪಥಬ್ರಾಹ್ಮಣ ೧.೫.೧—೯)


ಅಗ್ನಿಯು ಈ ಲೋಕದಲ್ಲಿ ಅತಿಶಯವಾಗಿ ಪ್ರತ್ಯಕ್ಷಫಲವನ್ನು ಕೊಡುವಂಥ (ಅದ್ಧಾ-ತಮಮ್) ಪ್ರತ್ಯಕ್ಷದೇವತೆಯಾಗಿರುವನು. 


ಅಗ್ನಿರ್ವೈ ದೇವಾನಾಂ ಮೃದುಹೃದಯತಮಃ |

(ಶತಪಥಬ್ರಾಹ್ಮಣ ೧.೫.೧—೧೦)


ಅಗ್ನಿದೇವನು ಇತರ ದೇವತೆಗಳಿಗಿಂತ ಶೀಘ್ರವಾಗಿ ಪ್ರಸನ್ನನಾಗುವನು. ಯಾಕೆಂದರೆ ಆತನು ಮೃದುವಾದ ಮನಸ್ಸುಳ್ಳವರಲ್ಲಿ ಅತ್ಯಂತ ಹೆಚ್ಚಿನವನು. 

Comments

Popular posts from this blog

ವೃದ್ಧಚಾಣಕ್ಯನೀತಿದರ್ಪಣಸಾರಃ ೨

ವೈದ್ಯಕೀಯಸುಭಾಷಿತಸಾಹಿತ್ಯಮ್ ೧

ಸೂಕ್ತಿವೈಭವ